ಬೆಂಗಳೂರು: ಮಹಿಳೆಗೋಸ್ಕರ ಪತಿಯನ್ನ ಕೊಲೆ ಮಾಡಿ ಮೂಟೆ ಕಟ್ಟಿ ನಂತರ ಶವವನ್ನು ಕಾರಿನ ಡಿಕ್ಕಿಯಲ್ಲಿ ಸಾಗಿಸಿ ಕುದುರೆಮುಖದ ಬಳಿ ನದಿಗೆ ಎಸೆದ ಘಟನೆಯೊಂದು ನಡೆದಿರುವ ಬಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.ನವಾಜ್(30) ಹತ್ಯೆಗೀಡಾದ ವ್ಯಕ್ತಿ. ಹಂತಕರು ಆಗಸ್ಟ್ 20 ರಂದು ನಸುಕಿನ ಜಾವ ನವಾಜ್ ನನ್ನು ಕ್ಯಾಂಟರ್ ವಾಹನ ಬಾಡಿಗೆಗೆ ಬೇಕು ಅಂತಾ ಕರೆಸಿಕೊಂಡು ಕೊಲೆ ಮಾಡಿದ್ದರು.ಬೆಳಕಿಗೆ ಬಂದಿದ್ದು ಹೇಗೆ?:
ನವಾಜ್ ತಲೆಗೆ ರಾಡ್‍ನಿಂದ ಹೊಡೆದು ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದರು. ನಂತರ ಶವವನ್ನು ಇಟಿಯೋಸ್ ಕಾರಿನ ಡಿಕ್ಕಿಯಲ್ಲಿಟ್ಟು ಕುದುರೆಮುಖ ಹತ್ತಿರ ನದಿಗೆ ಎಸೆದಿದ್ದರು. ಇತ್ತ ಹೊರ ಹೋಗಿದ್ದ ನವಾಜ್ ಮನೆಗೆ ಬಾರದಿದ್ದಾಗ ಪತ್ನಿ ಆಯೇಷಾ ವರ್ತೂರು ಪೊಲೀಸರಿಗೆ ದೂರು ನೀಡಿದ್ದರು. ಎರಡು ದಿನವಾದ್ರೂ ನವಾಜ್ ಬಗ್ಗೆ ಯಾವುದೇ ಸುಳಿವೂ ಸಿಕ್ಕಿರಲಿಲ್ಲ. ಹಾಗಾಗಿ ಪೊಲೀಸರು ನವಾಜ್ ಮೊಬೈಲ್‍ನ ಸಿಡಿಆರ್ ಪರಿಶೀಲನೆ ನಡೆಸಿದ್ದರು. ನಸುಕಿನ ಜಾವ 3.10ಕ್ಕೆ ಬಂದಿದ್ದ ಕರೆ ಬಗ್ಗೆ ತನಿಖೆ ನಡೆಸಿದ್ದರು.ವರ್ತೂರು ಪೊಲೀಸರು ತನಿಖೆ ನಡೆಸಿದ ವೇಳೆ ಶಿವಕುಮಾರ್ ಸ್ನೇಹಿತ ಪವನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಪವನ್ ವಿಚಾರಣೆ ವೇಳೆ ನವಾಜ್ ಕೊಲೆ ಮಾಡಿದ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಶಿವಕುಮಾರ್ ಸಹಿತ ನಾಲ್ವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಶಿವಕುಮಾರ್ ಕೊಲೆ ಹಿಂದಿನ ಕಾರಣ ಬಾಯ್ಬಿಟ್ಟಿದ್ದಾನೆ.ಕೊಲೆಗೆ ಕಾರಣವೇನು:
ಕೊಲೆಯಾದ ನವಾಜ್ ಪತ್ನಿ ಆಯಿಷಾಳನ್ನು ಶಿವಕುಮಾರ್ ಪ್ರೀತಿಸುತ್ತಿದ್ದನು. ಆದರೆ ಆಯಿಷಾಳಿಗೆ ಮದುವೆಯಾಗಿದೆ ಅಂತ ತಡವಾಗಿ ಗೊತ್ತಾಗಿತ್ತು. ಹೀಗಾಗಿ ಹೇಗಾದ್ರೂ ಮಾಡಿ ಆಕೆಯನ್ನು ಪಡೆದುಕೊಳ್ಳಬೇಕು ಅಂತ ಹಠ ಹಿಡಿದಿದ್ದನು. ಇದಕ್ಕಾಗಿ ಪ್ರೇಯಸಿಯ ಪತಿಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದನು. ಅಲ್ಲದೇ ಈ ಬಗ್ಗೆ ತನ್ನ ಗೆಳೆಯರಿಗೂ ತಿಳಿಸಿ ಅವರ ಜೊತೆಗೂಡಿ ನವಾಜ್ ನನ್ನು ಹತ್ಯೆ ಮಾಡಲಾಯಿತು ಅಂತ ಹೇಳಿದ್ದಾನೆ.1 ವರ್ಷದ ಹಿಂದೆ ಆಯಿಷಾ ಮತ್ತು ನವಾಜ್ ಮದುವೆಯಾಗಿದ್ದರು. ದಂಪತಿ ಬಾಡಿಗೆ ಮನೆಯಲ್ಲಿದ್ದಾಗ ಆಯಿಷಾಗೆ ಶಿವಕುಮಾರ್ ಪರಿಚಯವಾಗಿತ್ತು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv






 Advertisement 




Sign in to your account
Username or Email Address


Password

 Remember Me


