ತುಮಕೂರು: ಮದುವೆ ದಿಬ್ಬಣದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅನಂತಪುರ ಜಿಲ್ಲೆ ಪೆನುಕೊಂಡ ತಾಲೂಕಿನ ಸತ್ತಾರಪಲ್ಲಿ ಬಳಿ ನಡೆದಿದೆ.ವೈ.ಎಸ್.ಆರ್. ಪಕ್ಷದ ಮುಖಂಡ ಶ್ರೀಧರನಾರಾಯಣ ಅವರ ಪುತ್ರನ ಮದುವೆಗೆಂದು ಅನಂತಪುರಕ್ಕೆ ಬೊಲೆರೋ ವಾಹನದಲ್ಲಿ ತೆರಳುವ ವೇಳೆ ಧರ್ಮವರಂ ನಿಂದ ಬಾಳೆಹಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಗೋಪಾಲರೆಡ್ಡಿ(60), ರವೀಂದ್ರರೆಡ್ಡಿ(40), ಕೆ.ವೆಂಕಟಸ್ವಾಮಿ(65), ವಡ್ಡಿ ಆಂಜನೇಯುಲು(35), ವೆಂಕಟಪ್ಪ (50) ಮೃತಪಟ್ಟವರು.ಮೃತಪಟ್ಟವರನ್ನು ಪೆನುಗೊಂಡ ತಾಲೂಕಿನ ತಿಮ್ಮಾಪುರ ಮೂಲದವರು ಎಂದು ಹೇಳಲಾಗಿದೆ. ಮತ್ತೆ 10 ಮಂದಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಪೆನುಗೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


