ವಿಜಯಪುರ: ಸರ್ಕಾರಿ ಬಸ್ ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ ಘಟನೆ ವಿಜಯಪುರದ ತಾಳಿಕೋಟೆ ತಾಲೂಕು ಕೊಣ್ಣೂರು ಕ್ರಾಸ್ ಬಳಿ ನಡೆದಿದೆ.ಮೀರಜ್ ನಿಂದ ತಾಳಿಕೋಟೆಗೆ ಬಸ್ ಹೊರಟಾಗ ಅಪಾಘಾತದ ವೇಗಕ್ಕೆ ಸರ್ಕಾರಿ ಬಸ್ ಪಲ್ಟಿ ಆಗಿದ್ದು, ಅವಘಡ ಸಂಭವಿಸಿದೆ. ತಾಳಿಕೋಟೆ ಘಟಕಕ್ಕೆ ಸೇರಿದ ಎಂ 28 ಈ 2428 ಸರ್ಕಾರಿ ಬಸ್ ಎಂದು ತಿಳಿದು ಬಂದಿದೆ.ಈ ಅಪಘಾತದಲ್ಲಿ ಓರ್ವ ವ್ಯಕ್ತಿ ಮತ್ತು ನಾಲ್ಕು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕೊಣ್ಣೂರ ಕೆನರಾ ಬ್ಯಾಂಕ್ ನೌಕರ ವಿನೋಧ ಬಾಕಲಿ(35) ಹಾಗೂ ಮಸಬಿನಾಳ ಗ್ರಾಮದ ನಾಲ್ಕು ವರ್ಷದ ಬಾಲಕಿ ಅಮೃತಾ ಯಳಮೇಲಿ ಎಂದು ಗುರುತಿಸಲಾಗಿದೆ. ಬಸ್ ನಲ್ಲಿದ್ದ 15 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಪ್ರಯಾಣಿಕರನ್ನು 108 ಸಿಬ್ಬಂದಿ ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಈ ಘಟನೆ ಬಗ್ಗೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


