ಚಿಕ್ಕಬಳ್ಳಾಪುರ: ವರಮಹಾಲಕ್ಷ್ಮಿ ಪೂಜೆಗೆ ಹೂ ಖರೀದಿಗೆ ಬಂದಿದ್ದ ವಕೀಲ ಹಾಗೂ ಹಣ್ಣಿನ ವ್ಯಾಪಾರಿ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.ನಗರದ ಖಾಸಗಿ ಬಸ್ ನಿಲ್ದಾಣದ ರಸ್ತೆ ಬದಿಯ ಹಣ್ಣಿನ ಅಂಗಡಿ ಮುಂದೆ ವಕೀಲ ವೆಂಕಟರಮಣಪ್ಪ ಅವರು ತಮ್ಮ ಬೈಕನ್ನು ನಿಲ್ಲಿಸಿ, ಹೂ ಖರೀದಿಗೆ ತೆರಳುತ್ತಿದ್ದರು. ಆದರೆ ಹಣ್ಣಿನ ವ್ಯಾಪಾರಿ ಇಮ್ರಾನ್ ಅಂಗಡಿ ಮುಂದೆ ಬೈಕ್ ನಿಲ್ಲಿಸಬೇಡಿ ಎಂದು ಖಡಕ್ ಆಗಿಯೇ ಹೇಳಿದ್ದ.ಇಮ್ರಾನ್ ಮಾತಿನಿಂದ ಮುಜುಗರಕ್ಕೆ ಒಳಗಾದ ವೆಂಕಟರಮಣಪ್ಪ ವಾಗ್ದಾಳಿ ನಡೆಸಿದರು. ಬಳಿಕ ಮಾತಿಗೆ ಮಾತು ಬೆಳೆದು ಇಬ್ಬರು ಪರಸ್ಪರ ಹಲ್ಲೆ ನಡೆಸಿದ್ದಾರೆ. ವೆಂಕಟರಮಣಪ್ಪ ತಮ್ಮ ಬಳಿ ಇದ್ದ ಹೆಲ್ಮೆಟ್ ತೆಗೆದುಕೊಂಡು ಇಮ್ರಾನ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಆಗ ಪಕ್ಕದ ವ್ಯಾಪಾರಿಗಳು ಹಾಗೂ ಸ್ಥಳೀಯರು ಜಗಳ ಬಿಡಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


