ಕೋಲಾರ: ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಸಾಹಿತಿ, ಪತ್ರಕರ್ತ ಕೋಟಿಗಾನಹಳ್ಳಿ ರಾಮಯ್ಯ ಅವರ ಮನೆ ಬೆಂಕಿಗಾಹುತಿಯಾಗಿದ್ದು, ಮನೆಯಲ್ಲಿ ಸಂಗ್ರಹಿಸಿದ್ದ ಪುಸ್ತಕ ಭಂಡಾರ ಸುಟ್ಟು ಬೂದಿಯಾಗಿದೆ.ಕೋಲಾರ ತಾಲೂಕು ಪಾಪರಾಜನಹಳ್ಳಿಯ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ರಾಮಯ್ಯ ಅವರ ಮನೆ ಇದ್ದು, ಮಂಗಳವಾರ ರಾತ್ರಿ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಬೆಂಕಿಯ ಜ್ವಾಲೆಗೆ ಮನೆಯಲ್ಲಿ ಸಂಗ್ರಹಮಾಡಿದ್ದ ಪುಸ್ತಕಗಳು ಸುಟ್ಟು ಬೂದಿಯಾಗಿದೆ. ಅಲ್ಲದೇ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳು, ಟಿವಿ, ಕಂಪ್ಯೂಟರ್, ಬಟ್ಟೆಗಳು ಮತ್ತು ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸ್ಥಳೀಯರ ನೆರವಿನಿಂದ ಮನೆಯ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಕೋಲಾರದ ಆದಿಮ ಸಂಸ್ಕೃತಿಕ ಕೇಂದ್ರ ಸ್ಥಾಪನೆಯ ಹಿಂದೆ ರಾಮಯ್ಯ ಅವರು ಹೆಚ್ಚು ಶ್ರಮವಹಿಸಿದ್ದು, ಆದಿಮ ಕೇಂದ್ರದಲ್ಲೇ ಮನೆ ನಿರ್ಮಾಣ ಮಾಡಿ ವಾಸಿಸುತ್ತಿದ್ದರು. ಆದಿಮ ಕೇಂದ್ರವೂ ನೆಲ ಸಂಸ್ಕೃತಿ ಉಳಿಸಿ ಯುವ ಸಮುದಾಯಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿದೆ. ಅಲ್ಲದೇ ಯುವ ಸಮುದಾಯದಲ್ಲಿರುವ ಸುಪ್ತ ಪತ್ರಿಭೆಯನ್ನು ಗುರುತಿಸಿ ನೀರೆರೆಯುವ ಕಾರ್ಯ ಮಾಡುತ್ತಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


