ಯಾದಗಿರಿ: 2.5 ಲಕ್ಷ ರೂ. ಸಾಲ ಪಡೆದ ಹಣವನ್ನು ವಾಪಸ್ ಕೇಳಿದಕ್ಕೆ ಸಾಲ ಕೊಟ್ಟ ವ್ಯಕ್ತಿಯನ್ನೇ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಈ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಹೊರಭಾಗದಲ್ಲಿ ನಡೆದಿದೆ. ದುಂಡಪ್ಪ ಹೂಗಾರ (24) ಕೊಲೆಯಾದ ವ್ಯಕ್ತಿ. ಇದೇ ತಿಂಗಳು 19ಕ್ಕೆ ಮರೆಪ್ಪ ಎಂಬವನು ದುಂಡಪ್ಪ ಅವರಿಗೆ ಪಡೆದು ಸಾಲದ ಹಣವನ್ನು ಕೊಡುತ್ತೇನೆಂದು ನಂಬಿಸಿ, ಅವರನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದು ಮರೆಪ್ಪ, ದುಂಡಪ್ಪ ಅವರನ್ನು ಕೊಲೆ ಮಾಡುತ್ತಾನೆ. ಬಳಿಕ ಶವವನ್ನು ಕಾಲುವೆಯಲ್ಲಿ ಬಿಸಾಕಿದ್ದಾನೆ.ಘಟನೆ ಬಳಿಕ ದುಂಡಪ್ಪ ಅವರ ತಂದೆ ಸಾಹೇಬ್ ಅವರು ನಾಪತ್ತೆಯಾಗಿದ್ದಾರೆ ಎಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಆರೋಪಿ ಮರೇಪ್ಪನನ್ನು ಬಂಧಿಸಿದ್ದಾರೆ. ಸದ್ಯ ಅಗ್ನಿಶಾಮಕ ದಳದವರು ಶವಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


