ಬೆಂಗಳೂರು: ನಗರದ ಕೇಂದ್ರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಕ್ರೀಡಾಂಗಣ ಮದ್ಯ ಬಾಟಲಿಗಳ ರಾಶಿಗಳು, ಕಸದ ರಾಶಿಗಳಿಂದ ತುಂಬಿದೆ.ಮಂಗಳವಾರ ಸೆಂಟ್ರಲ್ ಕಾಲೇಜ್ ಕ್ರೀಡಾಂಗಣದಲ್ಲಿ ಇಂಡೋ-ನೇಪಾಳಿ ಹಬ್ಬ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕ್ರೀಡಾಂಗಣವನ್ನು ಬಾಡಿಗೆಗೆ ಕೊಟ್ಟು ಈಗ ಅದ್ವಾನ ಮಾಡಿದ್ದರು. ಕಾರ್ಯಕ್ರಮಕ್ಕೆ ಬಂದ ಜನರು ಕುಡಿದು ಕುಣಿದು ಕುಪ್ಪಳಿಸಿ ಬಾಟಲಿಗಳನ್ನ ಕ್ರೀಡಾಂಗಣದಲ್ಲೇ ಎಸೆದು ಹಾಳು ಮಾಡಿದ್ದಾರೆ.ಬೇರೆ ಕಾರ್ಯಕ್ರಮಗಳಿಗೆ ಕ್ರೀಡಾಂಗಣವನ್ನ ಬಾಡಿಗೆಗೆ ನೀಡುವ ನಿಯಮವಿಲ್ಲ. ಆದರೆ ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಜಾಫೆಟ್ ಹಣಕ್ಕಾಗಿ ಕ್ರೀಡಾಂಗಣವನ್ನ ಬಾಡಿಗೆ ನೀಡಿದ್ದಾರೆ. ಇದೀಗ ಕ್ರೀಡಾಂಗಣದಲ್ಲಿ ತುಂಬಿದ್ದ ಕಸ, ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಲು ಸಿಬ್ಬಂದಿ ಬಂದಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


