ಬೆಂಗಳೂರು: ಮುಜರಾಯಿ ಇಲಾಖೆ ಕೂಡಾ ಕೊಡಗು ಸಂತ್ರಸ್ತರ ನೆರವಿಗೆ ಮುಂದಾಗಿದ್ದು, ಒಟ್ಟು 12 ಕೋಟಿ 31 ಲಕ್ಷ ರೂ. ಹಣವನ್ನು ದೇಣಿಗೆ ನೀಡಲು ನಿರ್ಧಾರ ಮಾಡಿದೆ.ಹಣವನ್ನು ಕೂಡಲೇ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಜಮಾ ಮಾಡುವಂತೆ ದೇವಸ್ಥಾನಗಳ ಕಾರ್ಯನಿರ್ವಾಹ ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ಸಚಿವ ರಾಜಶೇಖರ್ ಪಾಟೀಲ್ ಸೂಚನೆ ನೀಡಿದ್ದಾರೆ.ರಾಜ್ಯದ ಪ್ರಮುಖ ದೇವಾಲಯಗಳಾದ ಕುಕ್ಕೆ ಸುಬ್ರಮಣ್ಯ ದೇವಸ್ಥಾನ 3 ಕೋಟಿ ರೂ., ನಂಜನಗೂಡು ಚಾಮುಂಡೇಶ್ವರಿ ದೇವಸ್ಥಾನ ಮತ್ತು ಉಡುಪಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ತಲಾ 1 ಕೋಟಿ ರೂ., ಕಟೀಲು ದುರ್ಗಾಪರಮೇಶ್ವರಿ 75 ಲಕ್ಷ ರೂ., ಬೆಂಗಳೂರಿನ ಬನಶಂಕರಿ, ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ಸ್ವಾಮಿ, ಸವದತ್ತಿ ಯಲ್ಲಮ್ಮ, ಕೊಪ್ಪಳ ಹಿಲಿಗೆಮ್ಮ, ಮಂದಾರ್ತಿ ತಲಾ 50 ಲಕ್ಷ ನೀಡಬೇಕು ಎಂದು ಸೂಚಿಸಲಾಗಿದೆ. ಉಳಿದ ದೇವಾಸ್ಥಾನಗಳ ಮೊತ್ತ 25 ಸಾವಿರ ರೂ. ನಿಂದ 25 ಲಕ್ಷ ರೂ. ವರೆಗೂ ನೀಡಲಾಗಿದೆ.ಪ್ರತ್ಯೇಕ ಅಕೌಂಟ್:
ರಾಜ್ಯದ ಹಲವು ಸಂಘ ಸಂಸ್ಥೆಗಳು ಹಾಗೂ ಭಕ್ತರು ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದು, ಮುಜರಾಯಿ ಇಲಾಖೆ ದೇಗುಲಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆದು ನೆರೆ ಸಂತ್ರಸ್ತರಿಗೆ ಹಣ ಸಂಗ್ರಹ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ದೇವಸ್ಥಾನಗಳು ಸಂಗ್ರಹಿಸಿದ ಸಹಾಯ ಹಣ ನೇರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬೇಕು ಎಂದು ಇಲಾಖೆ ಸೂಚನೆ ನೀಡಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


