ಬೆಂಗಳೂರು: ಅಜ್ಜಿಯನ್ನು ಪತ್ತೆ ಮಾಡುವಂತೆ ಮೊಮ್ಮಗಳು ಮನವಿ ಸಲ್ಲಿಸುತ್ತಿದ್ದಂತೆ ಸಚಿವ ಸಾ.ರಾ.ಮಹೇಶ್ 5 ಕಿ.ಮೀ. ನಡೆದು  ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜಲಪ್ರವಾಹದಲ್ಲಿ ಹೆಬ್ಬಟ್ಟಗಿರಿಯ ಉಮ್ಮವ್ವ (75) ನಾಪತ್ತೆಯಾಗಿದ್ದು, ಇವರನ್ನು ಪತ್ತೆ ಮಾಡುವಂತೆ ಪಬ್ಲಿಕ್ ಟಿವಿ ಮೂಲಕ ಮೊಮ್ಮಗಳು ಸಂಗೀತ ಸಚಿವರಿಗೆ ಮನವಿ ಮಾಡಿಕೊಂಡಿದ್ದರು. ತಕ್ಷಣವೇ ಸಂಗೀತಾ ಹೇಳಿದ್ದ ಸ್ಥಳಕ್ಕೆ ಕಾಲ್ನಡಿಗೆ ಮೂಲಕ ಹೋಗಿ ಜಾಗ ಪರಿಶೀಲನೆ ಮಾಡಿದರು. ಜೊತೆಗೆ ಅಲ್ಲಿನ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಅಜ್ಜಿಯನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ.ಮಡಿಕೇರಿಯ ಅವರನ್ನು ಹುಡುಕಿಕೊಡಿವಂತೆ ಇಂದು ಮೊಮ್ಮಗಳು ಸಂಗೀತ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಪತ್ತೆ ಹಚ್ಚಲು ಜಿಲ್ಲಾಧಿಕಾರಿಗೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv Sign in to your account
Username or Email Address


Password

 Remember Me


