ಕಲಬುರಗಿ: ತಲೆ ಮೇಲೆ ಶಾಲಾ ವಾಹನ (School Bus) ಹರಿದ ಪರಿಣಾಮ 3 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.ರಾಜಶೇಖರ್ ಎಂಬವರ ಪುತ್ರಿ ಖುಷಿ ಬನ್ನಟ್ಟಿ (3) ಮೃತ ಬಾಲಕಿ. ಶಾಲಾ ವಾಹನದಲ್ಲಿ ಅಣ್ಣ ಬಂದಿದ್ದ ವೇಳೆ ಆತನನ್ನು ಕರೆಯಲು ತಂದೆಯ ಹಿಂದೆ ಖುಷಿ ಹೋಗಿದ್ದಳು. ಆದರೆ ತಂದೆ ಈಕೆ ಬಂದಿರುವುದನ್ನು ಗಮನಿಸಿರಲಿಲ್ಲ. ಅಣ್ಣ ಬಸ್‌ನಿಂದ ಇಳಿದ ಬಳಿಕ ಶಾಲಾ ವಾಹನದ ಚಾಲಕ ಬಸ್ ಹಿಂದೆ ತಿರುಗಿಸಿದ್ದಾನೆ. ಈ ವೇಳೆ ಖುಷಿ ಬಸ್‌ನಡಿಗೆ ಸಿಲುಕಿದ್ದು, ಆಕೆಯ ತಲೆ ಮೇಲೆ ಶಾಲಾ ಬಸ್ ಹರಿದಿದೆ. ಘಟನೆಯ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಕಲ್ಲು ತೂರಾಟ, ತಲವಾರ್‌ ಪ್ರದರ್ಶನ, ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ – ನಾಗಮಂಗಲ ಧಗಧಗಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ಸುದ್ದಿಘಟನೆಯ ಬಳಿಕ ಶಾಲಾ ವಾಹನ ಚಾಲಕ ಶ್ರೀಶೈಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೈಡ್ರಾಮ – ಭಾರೀ ಭದ್ರತೆಯಲ್ಲಿ ನಗರಸಭಾ ಸದಸ್ಯರನ್ನು ಬರಮಾಡಿಕೊಂಡ ಸುಧಾಕರ್


 Advertisement 







 Advertisement 




Sign in to your account
Username or Email Address


Password

 Remember Me


