ಬೆಂಗಳೂರು: ಕೇಂದ್ರ ಸರ್ಕಾರದ (Union Govt) ಅನ್ಯಾಯದ ತೆರಿಗೆ ಹಂಚಿಕೆ ಕುರಿತು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.I have written to the Chief Ministers of Kerala, Tamil Nadu, Andhra Pradesh, Telangana, Maharashtra, Gujarat, Haryana, and Punjab regarding the unfair devolution of taxes by the Union government.States with higher GSDP per capita, like Karnataka and others, are being penalized… pic.twitter.com/SLqpNwVPDA— Siddaramaiah (@siddaramaiah) September 11, 2024ಕರ್ನಾಟಕ ಮತ್ತು ತಲಾವಾರು GSDP ಹೆಚ್ಚಿರುವ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಗಾಗಿ ದಂಡವನ್ನು ಅನುಭವಿಸುತ್ತಿವೆ. ಅಸಮಾನವಾಗಿ ಕಡಿಮೆ ತೆರಿಗೆ ಹಂಚಿಕೆಗಳನ್ನು ಪಡೆಯುತ್ತಿವೆ. ಈ ಅನ್ಯಾಯದ ವಿಧಾನವು ಸಹಕಾರಿ ಫೆಡರಲಿಸಂನ ಮನೋಭಾವವನ್ನು ದುರ್ಬಲಗೊಳಿಸುತ್ತದೆ. ಪ್ರಗತಿಪರ ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಸಿಎಂ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ: ಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ- ಸುನಿಲ್ ಕುಮಾರ್ಹಣಕಾಸಿನ ಒಕ್ಕೂಟದ ಸಮಸ್ಯೆಗಳ ಕುರಿತು ಒಟ್ಟಾಗಿ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ನಾನು ಅವರನ್ನು ಆಹ್ವಾನಿಸಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.Sign in to your account
Username or Email Address


Password

 Remember Me


