ಬೆಂಗಳೂರು: ಸ್ಯಾಂಡಲ್‍ವುಡ್ ನ ಯುವ ಪ್ರತಿಭೆ ಗಾಯಕ ಸಂಜಿತ್ ಹೆಗಡೆ ಸದ್ಯ ‘ಹ್ಯಾಂಗೋವರ್’ನಲ್ಲಿದ್ದಾರೆ. ಖಾಸಗಿ ಚಾನೆಲ್‍ನ ರಿಯಾಲಿಟಿ ಶೋ ಮೂಲಕ ಎಲ್ಲರ ಮನಗೆದ್ದಿರುವ ಮೈಕ್ ಟೈಸನ್, ಸಂಜಿತ್ ಕನ್ನಡದ ಹ್ಯಾಂಗೋವರ್ ಸಿನಿಮಾಕ್ಕೆ ಹಾಡೊಂದನ್ನು ಹಾಡಿದ್ದಾರೆ.ಕಾಲೇಜ್ ಕುಮಾರ್, ಚಮಕ್ ಚಿತ್ರಗಳಲ್ಲಿ ಹಾಡುವ ಮೂಲಕ ಕೇಳುಗರನ್ನು ಮೋಡಿ ಮಾಡಿರುವ ಸಂಜಿತ್ ಅವಕಾಶಗಳ ಸುರಿಮಳೆ ಪ್ರಾರಂಭವಾಗಿವೆ. ಹ್ಯಾಂಗೋವರ್ ಚಿತ್ರದಲ್ಲಿರುವ ರಾಕಿಂಗ್ ಸ್ಟೈಲಿನಲ್ಲಿರುವ ಈ ಹಾಡು ವೀರ್ ಸಮರ್ಥ್ ಸಂಯೋಜನೆಯಲ್ಲಿ ಮೂಡಿಬಂದಿದ್ದು, ಚೇತನ್ ಬಹದ್ದೂರ್ ಬರೆದಿದ್ದಾರೆ.“ದಿನವೂ ಒಂದು ರೋಚಕ.. ಹುಡುಕೋ ಒಳ್ಳೆ ಕೌತುಕ.. ಸ್ನೇಹ ಅತಿ ಭಾವುಕ.. ಪ್ರೀತಿ ಮನ ಮೋಹಕ..” ಎನ್ನುತ್ತಾ ಚಿತ್ರದಲ್ಲಿ ಮೂವರು ನಾಯಕರು ಮತ್ತು ಮೂವರು ನಾಯಕಿಯರು ಜರ್ನಿ ಮಾಡುತ್ತಾ ಹಾಡುವ ಫ್ರೆಂಡ್ ಶಿಪ್ ಹಾಡನ್ನು ಸಂಜಿತ್ ಹಾಡಿದ್ದಾರೆ. ಸಂಜಿತ್ ಜೊತೆ ರಾಕ್ ಸಿಂಗರ್ ಧೀರೇಂದ್ರ ಅವರು ಕೂಡ ಸಾಥ್ ನೀಡಿದ್ದು “ಮೋಜು ಮಸ್ತಿಯ ಹುಚ್ಚು.. ಮರುಕಳಿಸಲಿ ಅತೀ ಹೆಚ್ಚು.. ಎಣಿಸುತಿದೆ ಈ ವಾಚು” ಹಾಡನ್ನು ಹಾಡಿದ್ದಾರೆ.ಸದ್ಯದಲ್ಲೇ ಹಾಡುಗಳು ಸಿ ಮ್ಯೂಜಿಕ್ ಸಂಸ್ಥೆಯ ಮೂಲಕ ಸಂಗೀತ ಪ್ರೇಮಿಗಳ ಮನಮುಟ್ಟಿಲಿವೆ. ರಮನೀ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ ಡಿ ರವರು ನಿರ್ಮಿಸಿ, ವಿಠಲ್ ಭಟ್ ನಿರ್ದೇಶಿಸಿದ ಹ್ಯಾಂಗೋವರ್ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸುತ್ತಿದೆ.Sign in to your account
Username or Email Address


Password

 Remember Me


