ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹಳೆಕೆಸರೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯ ಮರಿಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ನಡೆಯಿತು.ಏ ಮರಿಸ್ವಾಮಿ… ನೀ ನನ್ನ ಜೊತೆ ಇದ್ದಲ್ಲಯ್ಯ ಬಾ ಅಂತ ಸಿಎಂ ಕರೆದ್ರು. ಆಗ ಮರಿಸ್ವಾಮಿ, ನಾನು ಜೆಡಿಎಸ್‍ನಲ್ಲಿದ್ದೇನೆ ಬರೋಲ್ಲ ಎಂದರು. ಆಗ ಸಿದ್ದರಾಮಯ್ಯ, ಆಯ್ತು ನೀ ಬರಬೇಡ ವೋಟು ಹಾಕು ಅಂದ್ರು. ಇದಕ್ಕೆ ಮರಿಸ್ವಾಮಿ, ನಾ ಬರೋದು ಇಲ್ಲ, ವೋಟು ಹಾಕೋಲ್ಲ ಎಂದ್ರು. ಅದಕ್ಕೆ ಸಿಎಂ ಆಯ್ತು ಬರಬೇಡ ಹೋಗು ಎಂದರು.ಸಿಎಂ ಮಾತಿನಿಂದ ಗರಂ ಆದ ಮರಿಸ್ವಾಮಿ, ನೀವು ನಮ್ಮ ಊರಿನಲ್ಲಿ ಇರೋದು. ಮೊದ್ಲು ನೀವೇ ಹೋಗಿ. ನಿಮ್ಮನ್ನ ಉಪಮುಖ್ಯಮಂತ್ರಿ ಮಾಡಿದ ಮಹಾಸ್ವಾಮಿಗೆ ದೊಡ್ಡ ನಮಸ್ಕಾರ ಎಂದರು. Sign in to your account
Username or Email Address


Password

 Remember Me


