ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಬಂದರೆ ಬಿಎಸ್‍ವೈ ಕೈ ಕಟ್ಟಿ ನಿಲ್ಲುತ್ತಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಲೇವಡಿ ಮಾಡಿದ್ದಾರೆ.ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಕಾಶ್ ರೈ, ಯಡಿಯೂರಪ್ಪನಿಗೆ ಸ್ವಾಭಿಮಾನ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗಿ ಉಳಿಯಲ್ಲ. ದೇಶದ ಪ್ರಜೆಗಳು ನಿರಂತರ ವಿಪಕ್ಷ ಆಗಬೇಕು. ಅದಕ್ಕಾಗಿ ಜಸ್ಟ್ ಆಸ್ಕಿಂಗ್ ಅಭಿಯಾನ ಶುರು ಮಾಡಿದ್ದೇನೆ ಎಂದರು.ರಾಜಕೀಯ ಚಾಣಾಕ್ಯನೆನ್ನುವ ಶಾ, ದೇಶದ ಪ್ರಗತಿಗೆ ಏನು ಮಾಡಿದ್ದಾರೆ? ಬಿಜೆಪಿಯೆಂಬ ಪ್ರಾಣಾಂತಿಕ ಕಾಯಿಲೆ ಮೊದಲು ಆ ಸಮಸ್ಯೆ ಬಗೆಹರಿಸಬೇಕು. ಹವಾಯಿ ಚಪ್ಪಲ್ ಹಾಕಿದವ ವಿಮಾನ ಹತ್ತಲ್ಲ ಅಂತ ಮೋದಿ ಭಾಷಣವನ್ನು ಅಣಕಿಸಿದ ಅವರು ಭಾರತ ಇನ್ನೊಂದು ಪಾಕಿಸ್ತಾನ ಆಗಬಾರದು ಎಂದು ಹೇಳಿದರು.
ರಾಜ್ಯದ ಜನ ಜಾಗೃತೆಯಿಂದ ಇರಿ. ಚುನಾವಣೆಗೆ ಮುನ್ನ ಗಲಭೆಯಾಗುವ ಸಾಧ್ಯತೆಯಿದ್ದು, ಸಿದ್ದರಾಮಯ್ಯ ಯಡಿಯೂರಪ್ಪನಿಗಿಂತ ಬೆಟರ್ ಎಂದು ಹೇಳಿ ರೈ ಹೊಗಳಿದರು.ನಾನು ಹಿಂದೂ ವಿರೋಧಿಯಲ್ಲ, ಆದರೆ ಸೆಕ್ಯೂಲರಿಸಂ ವಿದೇಶಿ ಸಂಸ್ಕೃತಿ, ಅದು ಭಾರತಕ್ಕೆ ಬೇಡ. ಮುಸ್ಲಿಂ ವಿರೋಧಿ ಮಾತನಾಡುವವರ ಅಪ್ಪನ ಬಾವಿಯಲ್ಲಿ ಪೆಟ್ರೋಲ್ ಬರುತ್ತಾ  ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.ಅನಂತಕುಮಾರ್ ಹೆಗಡೆ ನಾಲಗೆ ತುದಿಯಲ್ಲಿ ಕೋಮುವಾದ ಇದೆ. ಪ್ರತಾಪ್ ಸಿಂಹನ ಹೆಂಡತಿ ಬಗ್ಗೆ ಮಾತನಾಡಿದ್ರೆ ಸುಮ್ಮನಿರುತ್ತಾರಾ? ಎಂದು ಪ್ರಶ್ನಿಸಿ ಸಂಸದ ಪ್ರತಾಪ್ ಸಿಂಹನಿಗೆ ಸಂಸ್ಕೃತಿಯೇ ಗೊತ್ತಿಲ್ಲ ಅಂತ ಪ್ರಕಾಶ್ ರೈ ಕಿಡಿಕಾರಿದರು.






 Advertisement 




Sign in to your account
Username or Email Address


Password

 Remember Me


