ತುಮಕೂರು: ಎಲ್ಲರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡಿರುವ ಅಂಬಿ, ನಮ್ಮನ್ನ ಬೆಂಬಲಿಸುವ ನಿರ್ಧಾರ ಮಾಡಿದ್ರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.ಪ್ರಚಾರದಲ್ಲಿ ಮಾತನಾಡುವ ವೇಳೆ ಕುಮಾರಸ್ವಾಮಿ, ಅಂಬರೀಶ್ ನಮ್ಮ ಹಿರಿಯ ಸಹೋದರ. ಅವರು ಯಾವುದೇ ಪಕ್ಷದಲ್ಲಿದ್ರೂ ಒಂದು ರೀತಿ ಅಜಾತ ಶತ್ರು. ಎಲ್ಲರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡಿರುವ ಅವರು ನಮ್ಮನ್ನ ಬೆಂಬಲಿಸುವ ನಿರ್ಧಾರ ಮಾಡಿದ್ರೆ ಸ್ವಾಗತಿಸುತ್ತೇನೆ. ನಾನು ಒತ್ತಾಯ ಮಾಡಲ್ಲ. ಸಮಾಜದ ಎಲ್ಲಾ ವಿಚಾರಗಳನ್ನು ಅವರು ಗಮನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಒಳಿತಿನ ದೃಷ್ಟಿಯಿಂದ ಅವರು ಸೂಕ್ತ ನಿರ್ಧಾರ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ:ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್ಹಲವಾರು ವರ್ಷದಿಂದ ಯಾವುದೇ ಪಕ್ಷದಲ್ಲಿದ್ರೂ ದೇವೇಗೌಡರ ವಿಚಾರ, ಅವರ ಹೋರಾಟದ ಬಗ್ಗೆ ಬಿಚ್ಚು ಮನಸ್ಸಿನಿಂದ, ತುಂಬು ಹೃದಯದಿಂದ ಚರ್ಚೆ ಮಾಡುವುದರಲ್ಲಿ ಅಂಬರೀಶ್ ಮೊದಲನೇ ವ್ಯಕ್ತಿ ಎಂದು ಎಚ್‍ಡಿಕೆ ಹೇಳಿದರು.ಕುಮಾರಸ್ವಾಮಿ ಖಾಕಿ ಚಡ್ಡಿ ಎಂದು ಜಮೀರ್ ಅಹ್ಮದ್ ಹೇಳಿದ್ದಕ್ಕೆ, ಜಮೀರ್ ಒಬ್ಬ ಅನಾಗರೀಕ, ಅವರ ವಿಚಾರಕ್ಕೆಲ್ಲ ನಾನು ಉತ್ತರ ನೀಡುವುದಿಲ್ಲ. ಕೆಸರಿಗೆ ಕಲ್ಲುಹಾಕಿ ಮುಖಕ್ಕೆ ಸಿಡಿಸಿಕೊಳ್ಳಲು ಇಷ್ಟವಿಲ್ಲ ಎಂದು ತಿರುಗೇಟು ನೀಡಿದರು.Sign in to your account
Username or Email Address


Password

 Remember Me


