ಮಂಗಳೂರು: ಇಂದು ಬೆಳಿಗ್ಗೆ ಆರು ಜನ ಕಟ್ಟಡ ಕಾರ್ಮಿಕರ ಮೇಲೆ ಪಕ್ಕದ ಮಣ್ಣಿನ ಗುಡ್ಡೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಪುತ್ತೂರು ನಗರದ ನೆಲ್ಲಿಕಟ್ಟೆ ಬಳಿ ನಡೆದಿದೆ.ಕಟ್ಟಡ ಕಾರ್ಮಿಕರು 30 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಪಕ್ಕದ ಮಣ್ಣಿನ ಗುಡ್ಡೆ ಕುಸಿದು ನಾಲ್ಕು ಜನ ಮಣ್ಣಿನ ಅಡಿಯಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಸ್ಥಳೀಯರ ಸಹಕಾರ ಹಾಗೂ ಅಗ್ನಿಶಾಮಕ, ತುರ್ತು ಸೇವೆ ಸಿಬ್ಬಂದಿ ಸಹಾಯದಿಂದ ಮಣ್ಣಿನ ಅಡಿ ಸಿಲಿಕಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಜಲ್ಲಿಗುಡ್ಡೆಯ ಪದ್ಮನಾಭ(35), ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಅಡವಿಬಾವಿ ಗ್ರಾಮದ ಶಿವು ಅಲಿಯಾಸ್ ಶಿವಣ್ಣ(40) ಮೃತಪಟ್ಟವರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಹಾಂತೇಶ್ ಮತ್ತು ಯಶವಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ನಿರ್ಲಕ್ಷದಿಂದ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.Sign in to your account
Username or Email Address


Password

 Remember Me


