ಬೆಂಗಳೂರು: `ಭರ್ಜರಿ’ ಸಿನಿಮಾ ಯಶಸ್ಸಿನ ನಂತರ ನಟ ಧ್ರುವ ಸರ್ಜಾ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಅವರು ತಮ್ಮ ಮುಂದಿನ `ಪೊಗರು’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ನಟ ಧ್ರುವ `ಪೊಗರು’ ಸಿನಿಮಾಗಾಗಿ ಹೊಸ ಲುಕ್ ಟ್ರೈ ಮಾಡುತ್ತಿದ್ದಾರೆ. ಆದ್ದರಿಂದ ಅವರ ಹೊಸ ಸ್ಟೈಲಿಶ್ ಲುಕ್ ರಿವೀಲ್ ಆಗಬಾರದು ಎಂದು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಅಂತಾ ಹೇಳಲಾಗುತ್ತಿದೆ. ಆದರೆ ಈಗ ತುಂಬಾ ದಿನಗಳ ನಂತರ ಧ್ರುವ ಸರ್ಜಾ ತಮ್ಮ ಟ್ವಿಟ್ಟರ್ ಮೂಲಕ ವಿಡಿಯೋ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮುಖ್ಯವಾದ ಸಂದೇಶವನ್ನು ತಿಳಿಸಿದ್ದಾರೆ.ಇತ್ತೀಚೆಗೆ ಧ್ರುವ ಸರ್ಜಾ ಹೆಸರಿನಲ್ಲಿ ಯಾರೋ ಇನ್‍ಸ್ಟಾಗ್ರಾಂ ಅಕೌಂಟ್ ಕ್ರಿಯೇಟ್ ಮಾಡಿದ್ದು, ಅವರ ಹೆಸರಿನಲ್ಲೇ ಹೆಣ್ಣುಮಕ್ಕಳಿಗೆ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಅವರೇ ಈಗ ಸ್ವತಃ ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ವಿಡಿಯೋ: “ಮೊದಲಿನಿಂದನೂ ನಾನು ಫೇಸ್ ಬುಕ್ ಮತ್ತು ಇನ್‍ಸ್ಟಾಗ್ರಾಂ ನಲ್ಲಿ ಇಲ್ಲ. ಆದರೆ ಇನ್‍ಸ್ಟಾಗ್ರಾಂ ನಲ್ಲಿ ತುಂಬಾ ಚೀಪಾಗಿ ಮೆಸೇಜ್ ಮಾಡುತ್ತಿದ್ದರಂತೆ. ಹಾಗಾಗಿ ಅದು ನನ್ನ ಅಕೌಂಟ್ ಅಲ್ಲ. ಆದರೆ ಈಗ ಇನ್‍ಸ್ಟಾಗ್ರಾಂ ನಲ್ಲಿ ಯಾರೆಲ್ಲಾ ಆ ಅಕೌಂಟ್ ಫಾಲೋ ಮಾಡುತ್ತಿದ್ದೀರೋ ಅವರೆಲ್ಲರೂ ಅನ್ ಫಾಲೋ ಮಾಡಿ. ಒಂದು ವೇಳೆ ನಿಮಗೆ ನನ್ನ ಹೆಸರಿನ ಅಕೌಂಟ್ ನಿಂದ ಮೆಸೇಜ್ ಬಂದರೆ ಸೈಬರ್ ಕ್ರೈಂ ಅವರಿಗೆ ದೂರು ನೀಡಿ” ಎಂದು ಮನವಿ ಮಾಡಿದ್ದಾರೆ.Important message ಜೈ ಆಂಜನೇಯ ???????? pic.twitter.com/b12mUkdgI8— Dhruva Sarja (@DhruvaSarja) April 22, 2018Sign in to your account
Username or Email Address


Password

 Remember Me


