ಬೆಂಗಳೂರು: ಸಿನಿ ಅಂಗಳದಲ್ಲಿ ಕಾಸ್ಟಿಂಗ್ ಕೌಚ್ ಅನ್ನೋದು ಯುವ ನಟಿಯರಿಗೆ ಕಾಡುತ್ತಿದೆ ಅನ್ಸುತ್ತೆ. ಇಷ್ಟು ದಿನ ಸೈಲೆಂಟಾಗಿದ್ದ ನಟಿಮಣಿಯರು ಇದೀಗ ಸೆಕ್ಸ್ ಫಾರ್ ಚಾನ್ಸ್ ವಿಷಯವನ್ನು ಓಪನ್ ಆಗಿ ಹೇಳಿಕೊಳ್ಳುತ್ತಿದ್ದಾರೆ.ಇತ್ತೀಚೆಗಷ್ಟೇ ಸ್ಯಾಂಡಲ್‍ವುಡ್‍ನ ನಟಿ ಕೃಷಿ ತಾಪಂಡ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು. ಪರಭಾಷೆಯಲ್ಲಿ ಮಾತ್ರವಲ್ಲ ಸ್ಯಾಂಡಲ್‍ವುಡ್‍ನಲ್ಲೂ ಕೂಡ ಕಾಸ್ಟಿಂಗ್ ಕೌಚ್ ಇದೆ ಅನ್ನೋ ಸತ್ಯವನ್ನ ಬಿಚ್ಚಿಟ್ಟಿದ್ದರು.ಇದೀಗ ಕನ್ನಡದ ನಟಿ ಖುಷಿ ಶೆಟ್ಟಿ ಕಾಲಿವುಡ್ ಅಂಗಳದ ಮಂಚದ ಸತ್ಯವನ್ನ ಬಟಾಬಯಲು ಮಾಡಿದ್ದಾರೆ. ಅವಕಾಶ ಬೇಕೆಂದರೆ ನಿರ್ಮಾಪಕರ ಜತೆ ಸಹಕಾರ ಮಾಡಿಕೊಳ್ಳುವ ಸಂಸ್ಕೃತಿ ತಮಿಳು ಚಿತ್ರರಂಗದಲ್ಲಿದೆ. ಅಂತಹ ಸಂದರ್ಭವೊಂದು ತಮಗೂ ಎದುರಾಗಿತ್ತು ಅನ್ನೋದನ್ನ ನಟಿ ಖುಷಿ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದ್ದರು. ನಂತರ ಆ ಪೋಸ್ಟ್ ಅನ್ನು ಅವರು ಡಿಲೀಟ್ ಮಾಡಿದ್ದಾರೆ.ಪೋಸ್ಟ್ ನಲ್ಲಿ ಏನಿತ್ತು: ತಮಿಳು ಚಿತ್ರದಲ್ಲಿ ನಟಿಸಲು ನೀನು ನಿರ್ಮಾಪಕರ ಜೊತೆ ಸಹಕಾರ ಮಾಡಬೇಕೆಂದು ವ್ಯಕ್ತಿಯೊಬ್ಬರು ಹೇಳಿದ್ದರು. ಅದಕ್ಕೆ ನಾನು, ಇನ್ನೊಂದು ಸಲ ಅಜೆಸ್ಟ್ ಮೆಂಟ್, ಕಮಿಟ್‍ಮೆಂಟ್ ಹಾಗೂ ನಿರ್ಮಾಪಕರು ಕೇಳ್ತಾರೆ ಇನ್ನೊಬ್ಬರು ಕೇಳ್ತಾರೆ ಎಂದು ಏನಾದರೂ ಮೆಸೇಜ್ ಮಾಡಿದ್ರೆ ಚಪ್ಪಲಿಯಲ್ಲಿ ಹೊಡೆದರೆ ಕರ್ನಾಟಕ ಬಿಟ್ಟು ತಮಿಳುನಾಡು ಸೇರಬೇಕು ಹಾಗೆ ಬಾರಿಸುತ್ತೇನೆ. ನಿಮ್ಮ ಅಕ್ಕ-ತಂಗಿಗೂ ಹೀಗೆ ಕೇಳ್ತಿರಾ? ನಿಮ್ಮಂತವರು ಇರೋದ್ರಿಂದಲೇ ನಮ್ಮ ಚಿತ್ರರಂಗ ಹೆಸರು ಹಾಳಾಗ್ತಿರೋದು. ಅವಕಾಶ ಸಿಗದೆ ಹೋದ್ರು ಹೇಗೆ ಬದುಕಬೇಕೆಂಬುದು ನನ್ನ ಪೋಷಕರು ನನಗೆ ಹೇಳಿಕೊಟ್ಟಿದ್ದಾರೆ. ಕಣ್ಣಿಗೆ ಕಾಣಿಸದಂತೆ ಕರ್ನಾಟಕ ಬಿಟ್ಟು ತೊಲಗಿ ಎಂದು ವ್ಯಕ್ತಿಯೊಬ್ಬರಿಗೆ ಬೈದಿರುವ ವಾಟ್ಸಪ್ ಮೆಸೇಜ್‍ನ ಸ್ಕ್ರೀನ್‍ಶಾಟ್ ತೆಗೆದು, ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.ಈಗ ಖುಷಿ ತಮ್ಮ ಫೇಸ್‍ಬುಕ್ ಪೋಸ್ಟ್ ಡಿಲಿಟ್ ಮಾಡಿದ್ದಾರೆ. ಚಂದ್ರಮುಖಿ ಹಾಗೂ ಮಹಾನದಿ ಸೀರಿಯಲ್‍ಗಳಲ್ಲಿ ಅಭಿನಯಿಸಿರುವ ಖುಷಿ, `ಇದೀಗ ಬಂದ ಸುದ್ದಿ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್ ಬೆಳ್ಳಿತೆರೆ ಪ್ರವೇಶಿಸಿದ್ದರು. ಇದೀಗ ರಾಂಗ್ ಟರ್ನ್ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ.Sign in to your account
Username or Email Address


Password

 Remember Me


