ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕವೇ ಖ್ಯಾತಿ ಪಡೆದಿರುವ ಕಲಾವಿದೆ ನಯನಾ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಕಿರುತೆರೆಯ ಅಭಿನಯದ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಗಳಿಸಿದ್ದ ನಯನಾ ಈಗ ಮದುವೆಯಾಗಿದ್ದಾರೆ. ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಗೂ ಈಗ ತಾನೇ ಪಾದಾರ್ಪಣೆ ಮಾಡಿದ್ದಾರೆ. ಈಗ ನಯನಾ ಶರತ್ ಜೊತೆ ಸಪ್ತಪದಿ ತುಳಿದು ಮದುವೆಯಾಗಿದ್ದಾರೆ.ಶರತ್ ಬೆಂಗಳೂರಿನಲ್ಲಿ ಉದ್ಯಮಿ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಯನಾ ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಈಗ ಈ ಜೋಡಿ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ನಯನಾ ಕೈ ಹಿಡಿದಿರುವ ಶರತ್ ಅವರ ಸಂಬಂಧಿಕರೇ ಆಗಿದ್ದು, ಇಬ್ಬರು ಮನೆಯಲ್ಲಿ ಮಾತಕತೆ ನಡೆಸಿ ವಿವಾಹ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ಗುರು ಹಿರಿಯರ ಒಪ್ಪಿಗೆ ಮೇರೆಗೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಆರತಕ್ಷತೆಗೆ ಸಂಬಂಧಿಕರು ಮತ್ತು ಸ್ನೇಹಿತರು ಬಂದು ನವ ಜೋಡಿಗೆ ಶುಭಾಕೋರಿದ್ದಾರೆ. ನಯನ ತಂದೆಯ ವಿರೋಧದ ನಡುವೆಯೂ ಅಭಿನಯ ಮಾಡಬೇಕೆಂದು ಕನಸು ಇಟ್ಟುಕೊಂಡು ಕಾಮಿಡಿ ಕಿಲಾಡಿಗಳು ತಂಡಕ್ಕೆ ಸೇರಿಕೊಂಡಿದ್ದರು. ಇಂದು ಆ ಕಾರ್ಯಕ್ರಮದ ಮೂಲಕವೇ ಖ್ಯಾತಿ ಪಡೆದಿದ್ದಾರೆ.Sign in to your account
Username or Email Address


Password

 Remember Me


