ಶಿವಮೊಗ್ಗ: ಮಹಿಳೆಯೊಬ್ಬಳು ನಾಲ್ಕು ದಿನದ ಗಂಡು ಮಗುವನ್ನು ರಸ್ತೆ ಬದಿ ಇಟ್ಟು ಹೋದ ಘಟನೆ ಶಿವಮೊಗ್ಗದ ಪೆನ್ಷನ್ ಮಹಲ್ಲಾ ಎರಡನೇ ತಿರುವಿನಲ್ಲಿ ನಡೆದಿದೆ.ಇಂದು ಮುಂಜಾನೆ 5.45ರ ವೇಳೆಯಲ್ಲಿ ಮಹಿಳೆ ಹಾಗೂ ಒಬ್ಬ ಪುರುಷ ಮಗುವನ್ನು ಚರಂಡಿ ಪಕ್ಕ ಇಟ್ಟು ಹೋಗಿದ್ದಾರೆ. ಮಗುವನ್ನು ಚರಂಡಿ ಪಕ್ಕ ಬಿಟ್ಟು ಹೋಗುವ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಮಗುವಿನ ಕಾಲಿಗೆ ಹಾಕಿರುವ ಟ್ಯಾಗ್‍ನಲ್ಲಿ ಆಸ್ಪತ್ರೆ, ತಾಯಿ ವಿವರ ದಾಖಲಾಗಿದೆ. ತಾಯಿಯ ಹೆಸರು ಧನಲಕ್ಷ್ಮಿ ಎಂದು ಆಸ್ಪತ್ರೆಯ ಟ್ಯಾಗ್‍ನಲ್ಲಿ ನಮೂದಿಸಲಾಗಿದೆ. ಹಾಸನ ಶ್ರೀಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಧನಲಕ್ಷ್ಮಿಗೆ 20 ರಂದು ಹೆರಿಗೆ ಆಗಿ ಗಂಡು ಮಗು ಜನಿಸಿತ್ತು.ಸದ್ಯ ಮಗುವನ್ನು ಮೆಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.https://www.youtube.com/watch?v=18ib3-jPbOYSign in to your account
Username or Email Address


Password

 Remember Me


