ಕಾರವಾರ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ಇಂಟರ್ ನೆಟ್ ಮೂಲಕ ಕೊಲೆ ಬೆದರಿಕೆ ಕರೆ ಬಂದಿದೆ.ಸಚಿವರ ಮೊಬೈಲ್ ನಂಬರ್ ಹಾಗೂ ಲ್ಯಾಂಡ್ ಲೈನ್ ನಂಬರಿಗೆ ಮೂರು ಬಾರಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ. ಇಂದು ಬೆಳಗಿನ ಜಾವ ಶಿರಸಿಯ ಮನೆಯಲ್ಲಿ ಇರುವಾಗ ಬೆದರಿಕೆ ಹಾಕಲಾಗಿದ್ದು, ಮೊದಲು +04044 ನಂಬರಿನಿಂದ ಸಚಿವರ ಮೊಬೈಲ್ ಗೆ ಕರೆ ಮಾಡಲಾಗಿದೆ. ಆದರೆ ಈ ಕರೆ ಸ್ವೀಕರಿಸದ  ಹಿನ್ನೆಲೆಯಲ್ಲಿ ಮತ್ತೆ 0040440000 ನಂಬರಿನಿಂದ ಕರೆ ಮಾಡಲಾಗಿದೆ.ಈ ವೇಳೆ ಕರೆಯನ್ನು ಸಚಿವರ ಪತ್ನಿ ಕರೆ ಸ್ವೀಕರಿಸಿದ್ದರು. ಇದಾದ ನಂತರ ಮತ್ತೆ ಬೆಳಗಿನ ಜಾವ 2 ಘಂಟೆಗೆ ಕರೆ ಮಾಡಿದ್ದು, ಸಚಿವರೇ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಕರೆ ಮಾಡಿದ ದುಷ್ಕರ್ಮಿಗಳು ಸಚಿವರಿಗೆ ಬೆದರಿಕೆ ಹಾಕಿದ್ದು, ನೀನು ದೊಡ್ಡ ಲೀಡರಾ? ನಿನ್ನ ತಲೆ ಕಡಿದು ಹಾಕುತ್ತೇನೆ, ದೇಹವನ್ನ ತುಂಡು ಮಾಡುತ್ತೇನೆ ಎಂದು ಬೆದರಿಸಿದ್ದಾರೆ.  ಇದನ್ನೂ ಓದಿ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಶಟ್ಟಿ ಇಂದು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 504 ಹಾಗೂ 507 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಇದನ್ನೂ ಓದಿ : ಅನಂತಕುಮಾರ್ ಹೆಗ್ಡೆ ಪೊಲೀಸ್ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದ ಲಾರಿಯ ಒಡೆತನದ ಬಗ್ಗೆ ಒಂದಿಷ್ಟು ಮಾಹಿತಿ






 Advertisement 




Sign in to your account
Username or Email Address


Password

 Remember Me


