ವಿಜಯಪುರ: ಯುವಕನೊಬ್ಬ ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದಿದ್ದು, ಸಾರ್ವಜನಿಕರು ಕಕ್ಕಾಬಿಕ್ಕಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.ವಿಜಯಪುರ ನಗರದ ರಜಪೂತ ಗಲ್ಲಿ ಬಲಕಿಯಲ್ಲಿ ಶೇಖರ್ ಎಂಬ ಯುವಕ ಜೀವಂತ ಹಾವನ್ನು ಹಿಡಿದುಕೊಂಡು ಟೀ ಕುಡಿಯಲು ಬಂದಿದ್ದಾರೆ. ಶೇಖರ್ ಕೈಯಲ್ಲಿ ಹಾವು ಕಂಡ ಟೀ ಅಂಗಡಿಯಲ್ಲಿ ನೆರೆದಿದ್ದ ಸ್ಥಳೀಯರು ಗಾಬರಿಗೊಂಡಿದ್ದಾರೆ.ಕಳೆದ ಹಲವು ವರ್ಷಗಳಿಂದ ಹಾವು ಹಿಡಿಯುತ್ತಿರುವ ಶೇಖರ್, ರಜಪೂತ ಗಲ್ಲಿಯ ಮನೆಯೊಂದರಲ್ಲಿ ಕಾಣಿಸಿಕೊಂಡ ಕೇರೆ ಹಾವನ್ನು ಹಿಡಿದಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಹಾವನ್ನು ಹಿಡಿದುಕೊಂಡೇ ಟೀ ಕುಡಿಯಲು ಅಂಗಡಿಗೆ ಬಂದಿದ್ದಾರೆ. ಈ ಮೂಲಕ ನೆರೆದವರಲ್ಲಿ ಗಾಬರಿ ಮೂಡಿಸಿದ್ದಾರೆ.https://www.youtube.com/watch?v=5I_erPowe4ISign in to your account
Username or Email Address


Password

 Remember Me


