ಚಿತ್ರದುರ್ಗ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹೈಡ್ರೋಲಿಕ್ ಕ್ರೇನ್ ತಗಲಿ ದೇಹ ತುಂಡಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.ಹಿರಿಯೂರು ತಾಲೂಕಿನ ಧರ್ಮಪುರ ಬಳಿ ಈ ಅವಘಡ ಸಂಭವಿಸಿದೆ. 32 ವರ್ಷದ ಮೊಹಿದ್ದೀನ್ ಅವಘಡದಿಂದ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.ಘಟನೆಯಿಂದಾಗಿ ಮೊಹಿದ್ದೀನ್ ಅವರ ದೇಹದ ಅರ್ಧ ಭಾಗವೇ ತುಂಡಾಗಿದೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಳುವನ್ನು ಕೂಡಲೇ ಸ್ಥಳೀಯರು ಹಿರಿಯೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೊಯಿದ್ದೀನ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.ಗಾಯಾಳು ಮೊಹಿದ್ದೀನ್ 108 ವಾಹನದ ಚಾಲಕರಾಗಿದ್ದಾರೆ. ಕ್ರೆನ್ ಖಾಸಗಿ ಸೋಲರ್ ಕಂಪನಿಗೆ ಸೇರಿದ್ದಾಗಿದ್ದು, ಘಟನೆಯ ಬಳಿಕ ಚಾಲಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.ಈ ಸಂಬಂಧ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


