ಮಂಡ್ಯ: ಶಾಸಕ ಚಲುವರಾಯಸ್ವಾಮಿ ನಿಮಗೆ ಗೊತ್ತಿಲ್ಲ ಇನ್‍ಕಮ್ ಟ್ಯಾಕ್ಸ್ ಸವಾಸ, ನನಗೆ ಗೊತ್ತಿದೆ ಎಂದು ನಗುನಗುತ್ತಲೇ ಸಾವಿರಾರು ಜನರೆದುರು ಐಟಿ ಸಂಕಷ್ಟವನ್ನು ಇಂಧನ ಸಚಿವ ಡಿಕೆ.ಶಿವಕುಮಾರ್ ಬಿಚ್ಚಿಟ್ಟಿದ್ದಾರೆ.ನಾಗಮಂಗಲದಲ್ಲಿ ಶುಕ್ರವಾರ ಚಲುವರಾಯಸ್ವಾಮಿ ಪರವಾಗಿ ಸಮಾವೇಶದಲ್ಲಿ ಪಾಲ್ಗೊಂಡ ಅವರು, ತಾವೆದುರಿಸಿದ ಐಟಿ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ. ಚಲುವರಾಯಸ್ವಾಮಿ ಸಮಾರಂಭ ಮಾಡುವ ಕಷ್ಟ ಹೇಳಿಕೊಂಡು, ಪದೇ ಪದೇ ಸಭೆ ಮಾಡಿ ಎಂದು ಕೇಳಬೇಡಿ ಅಂತಾ ಭಾಷಣ ಮಾಡುತ್ತಿದ್ದರು.ಈ ವೇಳೆ ಚಲುವರಾಯಸ್ವಾಮಿ ಇದ್ದಲ್ಲಿಗೆ ಎದ್ದು ಬಂದ ಡಿಕೆಶಿ ಪದೇ ಪದೇ ಸಭೆ ಮಾಡಲು ಆಗಲ್ಲ. ನೀವು ಕಾಂಗ್ರೆಸ್ ಚಿಹ್ನೆ ಹಾಕಿಕೊಂಡು ಓಡಾಡಿದರೂ ಚಲುವರಾಯಸ್ವಾಮಿ ಲೆಕ್ಕಕ್ಕೆ ಬರೀತಾರೆ. ಐಟಿ ಸಂಕಷ್ಟ ನನಗೆ ಗೊತ್ತಿದೆ ಎಂದು ನಗು ನಗುತ್ತಲೇ ಡಿ.ಕೆ. ಶಿವಕುಮಾರ್ ಕಾರ್ಯಕರ್ತರೆದುರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


