ಕೋಲಾರ: ವೈದ್ಯರ ನಿರ್ಲಕ್ಷ್ಯದ ಪರಿಣಾಮ ಹತ್ತು ದಿನದ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.ಮಾಲೂರು ತಾಲೂಕು ಮಾಸ್ತಿ ಹೋಬಳಿಯ ಪ್ರವೀಣ್ ಹಾಗೂ ಶೈಲಜಾ ದಂಪತಿಯ ಗಂಡು ಮಗು ಸಾವನ್ನಪ್ಪಿದೆ. ಹತ್ತು ದಿನದ ಹಿಂದೆ ಹುಟ್ಟಿದ ಮಗುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಂಜೆಕ್ಷನ್ ನೀಡುವ ವೇಳೆ ಸೂಜಿ ತುಂಡಾಗಿದೆ. ತುಂಡಾದ ಸೂಜಿ ಮಗುವಿನ ದೇಹದಲ್ಲೇ ಬಿಡಲಾಗಿದೆ. ಇದರಿಂದ ಕಳೆದ ಏಳು ದಿನಗಳಿಂದ ಮಗುವಿಗೆ ವಿಪರೀತ ಜ್ವರ ಬಂದಿದೆ. ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ಮಗುವನ್ನು ಕರೆತಂದಾಗ ಮಗುವಿನ ದೇಹದಲ್ಲಿ ಸೂಜಿ ತುಂಡಾಗಿ ಉಳಿದಿರುವುದು ಕಂಡು ಬಂದಿದೆ.ಈ ವೇಳೆ ಜಿಲ್ಲಾಸ್ಪತ್ರೆಯ ವೈದ್ಯರು ತುಂಡಾಗಿದ್ದ ಸೂಜಿಯನ್ನು ಹೊರತೆಗೆದಿದ್ದಾರೆ. ಆದರೂ ಮಗು ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆ ಎಂದು ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


 Advertisement 







 Advertisement 




Sign in to your account
Username or Email Address


Password

 Remember Me


