ಕೊಪ್ಪಳ: ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಕನಕಗಿರಿಯ ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಿಗಿ ಅವರಿಗೆ ಗಂಗಾವತಿ ತಾಲೂಕಿನ ಯರಡೋಣ ಗ್ರಾಮಸ್ಥರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.ಗಂಗಾವತಿ ತಾಲೂಕಿನ ಯರಡೋಣ ಗ್ರಾಮಕ್ಕೆ ಪ್ರಚಾರಕ್ಕೆಂದು ಹೋಗಿದ್ದ ತಂಗಡಗಿ ಗ್ರಾಮದಲ್ಲಿ ಭಾಷಣ ಮಾಡುತ್ತಿರುವ ವೇಳೆ ಮತದಾರರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.ಕಳೆದ ಚುನಾವಣೆಯ ವೇಳೆ ಪ್ರಚಾರಕ್ಕೆ ಬಂದಾಗ ನೀವು ಹಲವು ಭರವಸೆ ನೀಡಿದ್ದೀರಿ. ಆದರೆ ಈ ಭರವಸೆ ಇನ್ನು ಪೂರ್ಣಗೊಳಿಸಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಹಿಂದೆ ನೀವು ಬಂದಾಗ ಗ್ರಾಮದಲ್ಲಿ ಆಂಜನೇಯ ಗುಡಿಯನ್ನು ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ರಿ. ಆದರೆ ಐದು ವರ್ಷ ಪೂರ್ಣಗೊಂಡರೂ ಆಂಜನೇಯ ಗುಡಿಯನ್ನು ಕಟ್ಟಿಸಿಲ್ಲ ಯಾಕೆ ಎಂದು ಪ್ರಶ್ನಿಸಿ ಗ್ರಾಮಸ್ಥರು ಶಾಸಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.ಗ್ರಾಮದಲ್ಲಿ ಭಾಷಣ ಮಾಡುವ ವೇಳೆ ಗ್ರಾಮಸ್ಥರು ಮತ್ತು ತಂಗಡಗಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿತ್ತು.https://www.youtube.com/watch?v=Y8e1S-yvZ-0






 Advertisement 




Sign in to your account
Username or Email Address


Password

 Remember Me


