ಬೆಂಗಳೂರು: ಚುನಾವಣೆಗೆ ದಿನಗಣನೆ ಶುರುವಾಗಿದ್ರೂ ಜೆಡಿಎಸ್‍ನಲ್ಲಿ ಇನ್ನೂ ಭಿನ್ನಮತ ಮುಂದುವರಿದಿದೆ. ಮೈಸೂರಿನ ಕೆ.ಆರ್. ನಗರದ ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಅವರನ್ನ ಸೋಲಿಸಲು ದೇವೇಗೌಡ್ರ ಸೊಸೆ ಭವಾನಿ ರೇವಣ್ಣ ಷಡ್ಯಂತ್ರ ರೂಪಿಸಿದ್ದಾರಾ ಅನ್ನೋ ಚರ್ಚೆ ಎದ್ದಿದೆ.ಇವತ್ತು ಸಾಲಿಗ್ರಾಮದ ಒಕ್ಕಲಿಗ ಮುಖಂಡರ ಜೊತೆ ಭವಾನಿ ರೇವಣ್ಣ ನಡೆಸಿದ ಗೌಪ್ಯ ಸಭೆಯ ವೀಡಿಯೋ ವೈರಲ್ ಆಗಿದೆ. ಸಾ.ರಾ.ಮಹೇಶ್ ಸೋಲಿಗೆ ತನ್ನದೇ ಹೆಸರು ಬಳಸಿಕೊಳ್ಳಿ ಅಂತ ಭವಾನಿ ರೇವಣ್ಣ ತನ್ನ ಬೆಂಬಲಿಗರಿಗೆ ಹೇಳಿದ್ದಾರೆ.ಕೆ.ಆರ್.ನಗರದಲ್ಲಿ ಭವಾನಿ ಸ್ಪರ್ಧಿಸೋಕೆ ಯತ್ನಿಸಿದ್ದರು. ಆದ್ರೆ, ದೇವೇಗೌಡ್ರು ಒಪ್ಪದ ಕಾರಣ ಈಗ ಈ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ, ಯುವಘರ್ಜನೆ ಹೆಸರಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕ್ಯಾಂಪೇನ್ ಶುರು ಮಾಡಿದ್ದಾರೆ.ತುಮಕೂರಿನ ಹಲವು ಕ್ಷೇತ್ರಗಳಲ್ಲಿ ಇದೇ ವಾರ ನಿಖಿಲ್ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ, ಇವತ್ತು ಚಿಕ್ಕಬಳ್ಳಾಪುರದ ಅಭ್ಯರ್ಥಿ ಬಚ್ಚೇಗೌಡರ ನಾಮಪತ್ರ ಸಲ್ಲಿಕೆ ವೇಳೆ ನಿಖಿಲ್ ಸಾಥ್ ನೀಡಿದ್ರು. ಆದ್ರೆ, ಟಿಕೆಟ್ ಆಕಾಂಕ್ಷಿ ಪ್ರಜ್ವಲ್ ಅವರನ್ನ ಸುಮ್ಮನಾಗಿಸಿದ್ದ ದೇವೇಗೌಡ್ರು, ಹಾಸನಕ್ಕೆ ಮಾತ್ರ ಸೀಮಿತಗೊಳಿಸಿದ್ರಾ ಅಂತ ಚರ್ಚೆ ಶುರುವಾಗಿದೆ. https://www.youtube.com/watch?v=_cQaaLgUtx0  Sign in to your account
Username or Email Address


Password

 Remember Me


