ರಾಯಚೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ ನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಬಾಲಕನೊರ್ವ ಸಾವನ್ನಪ್ಪಿರುವ ಘಟನೆ ರಾಯಚೂರಿನ ಅಂದ್ರೂನ್ ಕಿಲ್ಲಾದಲ್ಲಿ ನಡೆದಿದೆ.ಸಫ್ಜರ್ ಹುಸೇನ್ ಎಂಬವರ ಮನೆಗೆ ಬೆಂಕಿ ಬಿದ್ದಿದ್ದು ಬೆಂಕಿಯಲ್ಲಿ 11 ವರ್ಷದ ಖಾಜಾಹುಸೇನ್ ಸಾವನ್ನಪ್ಪಿದ್ದಾನೆ. ತಾಂತ್ರಿಕ ತೊಂದರೆಯಿಂದ ಮಂಗಳವಾರ ರಾತ್ರಿಯಿಂದ ರಾಯಚೂರಿನಲ್ಲಿ ವಿದ್ಯುತ್ ಸ್ಥಗಿತವಾಗಿತ್ತು. ಸಂಜೆ 5 ಗಂಟೆಯ ವೇಳೆಗೆ ಬಂದಿದ್ದ ವಿದ್ಯುತ್ ನಿಂದ ಶಾರ್ಟ್ ಸರ್ಕ್ಯೂಟ್‍ ಆಗಿದೆ.ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿ ಮಲಗಿದ್ದ ಬಾಲಕ ಬೆಂಕಿ ಪಾಲಾಗಿದ್ದಾನೆ. ಮನೆಯ ಸುತ್ತಮುತ್ತಲೂ ಯುಜಿಡಿ ಕಾಮಗಾರಿ ನಡೆಯುತ್ತಿದ್ದು ಅಗ್ನಿ ಶಾಮಕದಳ ಸಹ ಸರಿಯಾದ ಸಮಯದಲ್ಲಿ ಬೆಂಕಿ ನಂದಿಸುವಲ್ಲಿ ವಿಫಲವಾಗಿದೆ.ಘಟನೆ ಹಿನ್ನೆಲೆ ಸದರ ಬಜಾರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


