ಬೆಂಗಳೂರು: ಬಾದಾಮಿಯ ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಾರಣ ಪಟ್ಟಿಯಲ್ಲಿ ದೇವರಾಜ್ ಪಾಟೀಲ್ ಹೆಸರು ಘೋಷಣೆ ಆದರೂ ಅವರಿಗೆ ಇನ್ನೂ ಬಿ ಫಾರಂ ಸಿಕ್ಕಿಲ್ಲ.ಕಾಂಗ್ರೆಸ್ ಪಟ್ಟಿಯಲ್ಲಿ ಬಾದಾಮಿ ಕ್ಷೇತ್ರದಿಂದ ದೇವರಾಜ್ ಪಾಟೀಲ್ ಹೆಸರು ಪ್ರಕಟವಾಗಿದೆ. ಇನ್ನೂ ಬಿ ಫಾರಂ ಸಿಗದಿದ್ದಕ್ಕೆ ದೇವರಾಜ್ ಪಾಟೀಲ್ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ.ಬಾಗಲಕೋಟೆ ಕಾಂಗ್ರೆಸ್ ಮುಖಂಡರಗಳು ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಎರಡು ಕಡೆಯಿಂದ ಸ್ಪರ್ಧೆ ಮಾಡಲ್ಲ. ಬಾದಾಮಿ ಕ್ಷೇತ್ರದ ಅಭ್ಯರ್ಥಿಯ ವಿಚಾರದಲ್ಲಿ ಸ್ವಲ್ಪ ಗೊಂದಲವಿದೆ. ಹಾಗಾಗಿ ಆಯ್ಕೆಯನ್ನು ಕಾಯ್ದಿರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.ಸಿಎಂ ಎರಡು ಕಡೆ ಟಿಕೆಟ್ ಕೇಳಿಲ್ಲ. ನಾನು ಅಡ್ಡಿಯೂ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.ಕೆಪಿಸಿಸಿ ಕಚೇರಿ ಮುಂಭಾಗ ಇವತ್ತು ಮೂರ್ನಾಲ್ಕು ಕ್ಷೇತ್ರಗಳ ಟಿಕೆಟ್ ವಂಚಿತರ ಬೆಂಬಲಿಗರು ಜೊತೆಗೂಡಿ ಪ್ರತಿಭಟನೆಗಳ ಮೇಲೆ ಪ್ರತಿಭಟನೆ ನಡೆಸಿದ್ರು. ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅಧಿಕೃತ ಅಭ್ಯರ್ಥಿಗಳನ್ನ ಸೋಲಿಸ್ತೀವಿ ಅನ್ನೋ ಎಚ್ಚರಿಕೆ ನೀಡಿದ್ದಾರೆ.Sign in to your account
Username or Email Address


Password

 Remember Me


