ಬಾಗಲಕೋಟೆ: 10 ವರ್ಷದ ಬಾಲಕಿ ಮೇಲೆ ಪುರಸಭೆ ಮಾಜಿ ಸದಸ್ಯ ಅತ್ಯಾಚಾರಕ್ಕೆ ಯತ್ನಿಸಿ ಭರ್ಜರಿ ಒದೆ, ಏಟು ತಿಂದಿದ್ದಾನೆ.ಬಾಗಲಕೋಟೆ ಜಿಲ್ಲೆ ಬನಹಟ್ಟಿ ಪಟ್ಟಣದ ಅಶೋಕ ನಗರದಲ್ಲಿ ಘಟನೆ ನಡೆದಿದೆ. 60 ವರ್ಷದ ವೃದ್ಧ ಮೌಲಾಸಾಬ್ 10 ವರ್ಷದ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸುದ್ದಿ ತಿಳಿದ ಪೋಷಕರು, ಸ್ಥಳೀಯರು ಮೌಲಾಸಾಬನನ್ನು ಹಿಗ್ಗಾಮುಗ್ಗಾ ಥಳಿಸಿ ಒದೆ ನೀಡಿದ್ದಾರೆ.ಮೌಲಾಸಾಬ್ ರಬಕವಿ-ಬನಹಟ್ಟಿ ಪುರಸಭೆಯ ಮಾಜಿ ಸದಸ್ಯನಾಗಿದ್ದ. ಇನ್ನು ಈ ಬಗ್ಗೆ ಎಬಿವಿಪಿ ಕಾರ್ಯಕರ್ತರು ಬನಹಟ್ಟಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Sign in to your account
Username or Email Address


Password

 Remember Me


