ಬೆಳಗಾವಿ: ಚುನಾವಣೆ ಮೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.ವಿಶ್ವೇಶ್ವರಯ್ಯ ನಗರದ ಪಿಡಬ್ಲೂಡಿ ಹಾಪಾಳು ಬಿದ್ದ ವಸತಿ ಗೃಹದಲ್ಲಿ ಪತ್ತೆಯಾದ ನಕಲಿ ನೋಟುಗಳು ಪತ್ತೆಯಾಗಿದ್ದು, ಸದ್ಯ ಆರೋಪಿ ವಿಜಯಪುರ ಮೂಲದ ಅಜೀತಕುಮಾರ್ ನಿಡೋಣಿ(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಎರಡು ಸಾವಿರ ಹಾಗೂ ಐನೂರು ಮುಖ ಬೆಲೆಯ ನಕಲಿ ನೋಟುಗಳನ್ನು ಸಂಗ್ರಹ ಮಾಡಲಾಗಿತ್ತು. ಇದರ ಖಚಿತ ಮಾಹಿತಿ ಪಡೆದಿದ್ದ ಚುನಾವಣಾಧಿಕಾರಿಗಳು ಇಂದು ದಾಳಿ ನಡೆಸಿ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.ಕಲರ್ ಪ್ರಿಂಟಿಂಗ್ ಮಷಿನ್‍ನಲ್ಲಿ ಬಿಳಿ ಕಾಗದದ ಮೇಲೆ ಪ್ರಿಂಟ್ ಮಾಡಿರುವ ನೋಟುಗಳು, ಜೊತೆಗೆ ರದ್ದಾದ ಒಂದು ಸಾವಿರ ಮುಖ ಬೆಲೆಯ ನೋಟುಗಳು ಹಾಗೂ ಎರಡು ಸಾವಿರ ನೋಟಿನ ಅಳತೆಯ ಕಟ್ ಮಾಡಿರುವ ಬಿಳಿ ಕಾಗದ ಬಂಡಲ್‍ಗಳು ಪತ್ತೆಯಾಗಿವೆ.ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


