ಬೆಂಗಳೂರು: ಈ ಹಿಂದೆ ಪಕ್ಷದ ಪ್ರಚಾರಕ್ಕಾಗಿ ರಾಜ್ಯದ ವಿವಿಧ ಮಠಗಳಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಹಿತಿಗಳಿಂದ ಸಲಹೆ ಪಡೆಯಲು ಮುಂದಾಗಿದ್ದಾರೆ.ಕರ್ನಾಟಕ ಚುನಾವಣೆಯ ಕುರಿತಾಗಿ ಸಲಹೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಏಪ್ರಿಲ್ 18 ಮತ್ತು 19ರಂದು ನಗರಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಏ.18ರಂದು ರಾಜರಾಜೇಶ್ವರಿ ನಗರದಲ್ಲಿರುವ ದಲಿತ ಸಾಹಿತಿ ಸಿದ್ಧಲಿಂಗಯ್ಯ ಮತ್ತು ಹಂಪಿನಗರದಲ್ಲಿರುವ ಸಂಶೋಧಕ ಚಿದಾನಂದಮೂರ್ತಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.ಈ ವೇಳೆ ಇಬ್ಬರು ಸಾಹಿತಿಗಳೊಂದಿಗೆ ಚರ್ಚೆ ನಡೆಸಿ ರಾಜ್ಯ ವಿಧಾನ ಸಭಾ ಚುನಾವಣೆಗೆ ಅವರಿಂದ ಸಲಹೆಯನ್ನು ಸಂಗ್ರಹಿಸಲಿದ್ದಾರೆ. ಸಾಹಿತಿ ಹಾಗೂ ಸಂಶೋಧಕರಿಂದ ಸಲಹೆ ಪಡೆದು ಪರಿಣಾಮಕಾರಿ ಪ್ರಣಾಳಿಕೆಯನ್ನು ಸಿದ್ಧ ಪಡಿಸುವ ಉದ್ದೇಶವನ್ನು ಅಮಿತ್ ಶಾ ಹೊಂದಿದ್ದಾರೆ ಎನ್ನಲಾಗಿದೆ.Sign in to your account
Username or Email Address


Password

 Remember Me


