ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಾತ್ ಬಲೂನ್ ನುಂಗಿ ಸಾವನ್ನಪ್ಪಿರುವ ಘಟನೆ ನಗರದ ಹುಳಿಮಾವಿನ ಬಳಿಯ ಕಮ್ಮನಹಳ್ಳಿಯಲ್ಲಿ ನಡೆದಿದೆ. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!ಎರಡು ವರ್ಷದ ನವಾಜ್ ಬಲೂನ್ ನುಂಗಿ ಸಾವನ್ನಪ್ಪಿದ ರ್ದುದೈವಿ ಮಗು. ಇಂದು ಮಧ್ಯಾಹ್ನ ವೇಳೆ ಮನೆ ಬಳಿ ಆಟವಾಡುತ್ತಿದ್ದ ನವಾಜ್ ಆಕಾಸ್ಮಿಕವಾಗಿ ಬಲೂನ್ ನುಂಗಿ ಉಸಿರಾಟದ ತೊಂದರೆ ಎದುರಿಸಿದ್ದ. ತಕ್ಷಣ ಎಚ್ಚೆತ್ತ ಪೋಷಕರು ಮಗುವನ್ನು ಅಪೋಲೋ ಆಸ್ಪತ್ರೆ ಕರೆದ್ಯೊದಿದ್ದರು. ಆದರೆ ಮಗುವನ್ನ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕ ಸಾವುಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವುSign in to your account
Username or Email Address


Password

 Remember Me


