ಬೆಂಗಳೂರು: ಬಸವನ ಬಾಗೇವಾಡಿ ಕ್ಷೇತ್ರದ ಮಾಜಿ ಸಚಿವ ಎಸ್‍ಕೆ ಬೆಳ್ಳುಬ್ಬಿ ಬೆಂಬಲಿಗರೊಬ್ಬರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ಬಿದ್ದ ಘಟನೆ ನಡೆದಿದೆ.ಇಂದು ಬೆಳಗ್ಗೆ ಬಿಎಸ್ ವೈ ಅವರು ವಾಯುವಿಹಾರಕ್ಕೆ ತೆರಳಿದ್ದ ವೇಳೆ ಬೆಳ್ಳುಬ್ಬಿ ಬಂಟ ಬಂದು ಟಿಕೆಟ್‍ಗಾಗಿ ಯಡಿಯೂರಪ್ಪ ಅವರ ಕಾಲು ಹಿಡಿದು ನಮಸ್ಕರಿಸಿದ್ದಾರೆ. ಈ ವೇಳೆ ಬಿಎಸ್ ವೈ ಅವರು, ನನ್ ಕಾಲಿಗೆ ಬೀಳ್ಬೇಡಪ್ಪ, ಟಿಕೆಟ್ ನಾನು ಕೊಡಲ್ಲ, ಹೈಕಮಾಂಡ್ ಕೊಡೋದು ಅಂತ ಹೇಳಿ ಮುಂದೆ ನಡೆದಿದ್ದಾರೆ.ಇದೇ ವೇಳೆ ಮಾಜಿ ಸಚಿವರ ಬೆಂಬಲಿಗರು ಬೆಳ್ಳುಬ್ಬಿ ಅವರಿಗೆ ಟಿಕೆಟ್ ಕೊಡುವಂತೆ ಒತ್ತಡ ಹಾಕಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.Sign in to your account
Username or Email Address


Password

 Remember Me


