ಬಳ್ಳಾರಿ: ರಾಜಕೀಯ ರಣರಂಗದ ಅಖಾಡದಿಂದ ದೂರ ಉಳಿದಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇದೀಗ ಸದ್ದಿಲ್ಲದೇ ಕಾಂಗ್ರೆಸ್‍ಗೆ ಶಾಕ್ ಕೊಟ್ಟಿದ್ದಾರೆ.ಕಾಂಗ್ರೆಸ್ ಟಿಕೆಟ್ ಸಿಗದೇ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ಎನ್‍ವೈ ಗೋಪಾಲಕೃಷ್ಣರನ್ನು ಬಿಜೆಪಿಗೆ ಸೆಳೆದಿದ್ದಾರೆ. ಕಾಂಗ್ರೆಸ್ ನಿಂದ ಟಿಕೆಟ್ ವಂಚಿತರಾದ ಬಳಿಕ ಎನ್.ವೈ.ಗೋಪಾಲಕೃಷ್ಣ ಮನೆಗೆ ಸೋಮವಾರ ರಾತ್ರಿ ಶ್ರೀರಾಮುಲು ಜೊತೆಗೆ ದಿಢೀರ್ ಧಾವಿಸಿದ ಜನಾರ್ದನ ರೆಡ್ಡಿ, ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ಅಧಿಕೃತವಾಗಿ ಎನ್‍ವೈ ಗೋಪಾಲಕೃಷ್ಣ ಕಮಲ ಹಿಡಿಯಲಿದ್ದಾರೆ.ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಮ್ಮ ಮನೆಗೆ ಬಂದು ಬಿಜೆಪಿ ಸೇರುವಂತೆ ಸಲಹೆ ನೀಡಿದ್ರು. ಇನ್ನು ಟಿಕೆಟ್ ನೀಡೋದು ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ ಅಂತಾ ಎನ್ ವೈ ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.ಎನ್‍ವೈ ಗೋಪಾಲಕೃಷ್ಣ ಜೊತೆಗಿನ ಮಾತುಕತೆಯ ನಂತರ ಜನಾರ್ದನ ರೆಡ್ಡಿ ಯಾವುದೇ ಪ್ರತಿಕ್ರಿಯೆ ನೀಡದೇ ಹೋಗಿದ್ದಾರೆ. ಕೂಡ್ಲಗಿ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿರುವ ಎನ್ ವೈ ಗೋಪಾಲಕೃಷ್ಣ ಬಿಜೆಪಿ ಸೇರ್ಪಡೆಗೊಂಡಿರುವುದು ಕಾಂಗ್ರೆಸ್‍ಗೆ ದೊಡ್ಡ ಹೊಡೆತ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.Sign in to your account
Username or Email Address


Password

 Remember Me


