ದಾವಣಗೆರೆ: ಲಾರಿ, ಬೈಕ್ ನಡುವೆ ಅಪಘಾತವಾಗಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಸಮೀಪ ನಡೆದಿದೆ.ಹನುಮಂತಪ್ಪ (32) ಮತ್ತು ಹನುಮಂತ (25) ಇಬ್ಬರು ಮೃತ ದುರ್ದೈವಿಗಳು. ಮೃತರು ನ್ಯಾಮತಿ ತಾಲೂಕಿನ ಸಿದ್ದಾಪುರ ಗ್ರಾಮದವರು ಎಂದು ಹೇಳಲಾಗಿದೆ. ಲಾರಿ ಶಿಕಾರಿಪುರದಿಂದ ಸವಳಂಗದ ಕಡೆ ಬರುತ್ತಿದ್ದು, ಲಾರಿಯಲ್ಲಿ ಕಟ್ಟಿಗೆ ಸಾಗಿಸುತ್ತಿದ್ದರು.ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


