ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಟುವಟಿಕೆಯಲ್ಲಿರುವ ನವರಸನಾಯಕ ಜಗ್ಗೇಶ್ ಅವರು ಇಂದು ಆ ದಿನಗಳನ್ನು ನೆನೆಸಿಕೊಂಡ್ರೆ ಇದೀಗ ಕಣ್ಣೀರು ಬರುತ್ತದೆ ಅಂತ ಹೇಳಿದ್ದಾರೆ.ಟ್ವಿಟ್ಟರ್ ನಲ್ಲಿ ನಟ ಸುದೀಪ್ ಅಭಿಮಾನಿಯೊಬ್ಬರು, ಅಂಬರೀಶ್, ರವಿಚಂದ್ರನ್, ಜಗ್ಗೇಶ್ ಹಾಗೂ ವಿಷ್ಣುವರ್ಧನ್ ಜೊತೆಯಲ್ಲಿರೋ ಹಳೆಯ ಫೋಟೋವೊಂದನ್ನು ಟ್ಯಾಗ್ ಮಾಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಅವರು, ಮೂವರು ನನ್ನ ಛೇಡಿಸುತ್ತಿರುವುದು..!, ಅಂಬರೀಶ್ ರವರು ನಾನೇ ಜಾಸ್ತಿ ಕರಿಯ ಎಂದು.. ನಾನು ಇಲ್ಲಾ ನೀವೆ ಎಂದು.. ಆಗ ಅಂಬರೀಶ್ ಬಿಚ್ಚೋ ಶರ್ಟು ನೋಡೇಬಿಡೋಣ ಎಂದಾಗ ನಾನು ಇದು ಪಬ್ಲಿಕ್ ಅಂತ ಹೇಳಿದೆ. ಈ ವೇಳೆ ಎಲ್ಲರು ಬಿಚ್ಚು ನೋಡಣ ಎಂದಾಗಿನ ಚಿತ್ರವಾಗಿದೆ. ಆ ದಿನ ನೆನೆದರೆ ಕಣ್ಣೀರು ಬರುತ್ತದೆ. ಎಂಥ ಅದ್ಭುತ ಸಂತೋಷದ ದಿನಗಳು. ಇಂದು ಆ ಸಂತೋಷವೆಲ್ಲಾ ಇಲ್ಲ ಅಂತ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡರು.ಸದ್ಯ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಮೇಶ್ ಚಂದ್ರ ನಿರ್ದೇಶಿಸುತ್ತಿದ್ದು, ಶೃತಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಮಧುಬಾಲ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.#ವಿಷ್ಣು,sir,ಅಪರೂಪದ ಫೋಟೋ,@Jaggesh2 ,@sumalathaA ,@Dr_VSSOFFICIAL , pic.twitter.com/RcMSuTrrf7— ಕಲಾಭೂಷಣ ಕಿಚ್ಚಸುದೀಪfan (@KicchaSudeep0) April 16, 2018ಮೂವರು ನನ್ನ ಛೇಡಿಸುತ್ತಿರುವುದು..!ಅಂಬರೀಶ್ ರವರು ನಾನೆ ಜಾಸ್ತಿ ಕರಿಯ ಎಂದು..ನಾನು ಇಲ್ಲಾ ನೀವೆ ಎಂದು..ಆಗ ಅಂಬರೀಶ್ ಬಿಚ್ಚೋ ಶರ್ಟು ನೋಡೆಬಿಡಣ ಎಂದಾಗ ನಾನು ಇದು ಪಬ್ಲಿಕ್ ಎಂದಾಗ ಎಲ್ಲರು ಬಿಚ್ಚುನೋಡಣ ಎಂದಾಗಿನ ಚಿತ್ರ..ಆ ದಿನ ನೆನೆದರೆಕಣ್ಣೀರು ಬರುತ್ತದೆ..ಎಂಥ ಅದ್ಭುತ ಸಂತೋಷದ ದಿನಗಳು..ಇಂದು ಎಲ್ಲಾ ಇದೆ ಆ ಸಂತೋಷವಿಲ್ಲಾ #ಬದುಕು. https://t.co/KmY5tuXVQk— ನವರಸನಾಯಕ ಜಗ್ಗೇಶ್ (@Jaggesh2) April 17, 2018Sign in to your account
Username or Email Address


Password

 Remember Me


