ಮೈಸೂರು: ಮುಖ್ಯಮಂತ್ರಿಯವರು ಒಂದು ತಿಂಗಳು ಪ್ರಚಾರ ಮಾಡಿದ್ರೂ ರಾಮನಗರದಲ್ಲಿ ನನ್ನ ಸೋಲಿಸಲಾಗಲ್ಲ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳು ಕುಮಾರಸ್ವಾಮಿ ಅಥವಾ ನನ್ನ ಜೇಬಿನಲ್ಲಿರಲ್ಲ. ವೀರಪ್ಪ ಮೊಯ್ಲಿ ವಿರುದ್ಧ ಕುಮಾರಸ್ವಾಮಿ ಯಾಕೆ ಸೋತ್ರು? ರಾಮನಗರ ಜಿಲ್ಲೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಯಾಕೆ ಗೆಲ್ಲಿಸಿಕೊಳ್ಳೋದಕ್ಕೆ ಆಗಲಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಗೆಲ್ಲಬೇಕು ಸೋಲಬೇಕು ಅನ್ನೋದನ್ನು ಜನ ತೀರ್ಮಾನ ಮಾಡ್ತಾರೆ ಅಂತ ಹೇಳಿದ್ರು.ಬಾದಾಮಿಯಲ್ಲಿ ಸ್ಪರ್ಧೆ ಮಾಡ್ತೀನಿ ಅಂತ ಎಲ್ಲಿಯೂ ಹೇಳಿಲ್ಲ. ಇಷ್ಟು ಬಾರಿ ಚುನಾವಣೆ ಎದುರಿಸಿದ್ದೇನೆ. ಯಾವಾಗಲಾದರೂ ನಾನು 2 ಕಡೆ ಸ್ಪರ್ಧಿಸಿದ್ದೀನಾ? ನಾನು ಚಾಮುಂಡೇಶ್ವರಿ ಒಂದರಲ್ಲೇ ಸ್ಪರ್ಧೆ ಮಾಡೋದು ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ್ರು.ಇದೇ ವೇಳೆ ಚಾಮುಂಡೇಶ್ಚರಿಯಲ್ಲೇ ಸಿದ್ದರಾಮಯ್ಯ ಅವರಿಗೆ ಮೋಕ್ಷ ನೀಡುವ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಈ ರೀತಿ ಹೇಳಿಕೆಗಳನ್ನು ನೀಡಬಾರದು ಅಂತ ಕುಮಾರಸ್ವಾಮಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ ಅವರು, ಉಪಚುನಾವಣೆಯಲ್ಲೂ ಕುಮಾರಸ್ವಾಮಿ ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡಿದ್ರು. ಆದ್ರೆ ಗೆದ್ದಿದ್ದು ಮಾತ್ರ ನಾನೇ, ಏನ್ ಮಾಡಿದ್ರು ಅವಾಗ? ಈವಾಗ್ಲೂ ಅದೇ ರೀತಿ ಆಗುತ್ತೆ ಅಂತ ಅವರು ಹೇಳಿದ್ರು.Sign in to your account
Username or Email Address


Password

 Remember Me


