ರಾಮನಗರ: ಇತ್ತೀಚೆಗೆ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ಮಾರಮ್ಮ ದೇವಿ ಜಾತ್ರೆಯ ವೇಳೆ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದ ಅರ್ಚಕ ರವಿ ಪೂಜಾರಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.ಏಪ್ರಿಲ್ 11ರಂದು ಉಯ್ಯಂಬಳ್ಳಿ ಗ್ರಾಮದ ಮಾರಮ್ಮದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವ ವೇಳೆ ರವಿ ಪೂಜಾರಿ ಬಿದ್ದಿದ್ದರು. ರವಿ ಅಗ್ನಿಕೊಂಡದಲ್ಲಿ ಬೀಳುತ್ತಿದ್ದಂತೆ ಅವರನ್ನ ಸ್ಥಳೀಯರು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ರು. ತೀವ್ರವಾಗಿ ಗಾಯಗೊಂಡಿದ್ದ ರವಿ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಿ ಅವರನ್ನು ದಾಖಲಿಸಲಾಗಿತ್ತು.ತೀವ್ರವಾಗಿ ಗಾಯಗೊಂಡಿದ್ದ ರವಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಒಂದು ತಿಂಗಳ ಹಿಂದೆ ಸಾತನೂರಿನ ಮಾರಮ್ಮದೇವಿ ಜಾತ್ರೆಯಲ್ಲಿಯೂ ಅಗ್ನಿಕೊಂಡ ಹಾಯಲು ಮುಂದಾದ ವ್ಯಕ್ತಿ ಬಿದ್ದು ಗಾಯಗೊಂಡಿದ್ದರು. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.https://www.youtube.com/watch?v=kuyfjS55nPISign in to your account
Username or Email Address


Password

 Remember Me


