ಬೆಂಗಳೂರು: ಫ್ಲೈ ಓವರ್ ಮೇಲೆ ನಿಂತಿದ್ದ ಟಾಟಾ ಏಸ್‍ಗೆ ಓಮ್ನಿ ಕಾರು ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗದಲ್ಲಿ ನಡೆದಿದೆ.ಈ ಘಟನೆ ನೆಲಮಂಗಲದ ಸೊಂಡೆಕೊಪ್ಪ ಬೈಪಾಸ್ ಫ್ಲೈ ಓವರ್ ಮೇಲೆ ಸಂಭವಿಸಿದ್ದು, ಫ್ಲೈ ಓವರ್ ಮೇಲೆ ಟಾಟಾಏಸ್ ಕೆಟ್ಟು ನಿಂತಿತ್ತು. ಈ ವೇಳೆ ತುಮಕೂರನಿಂದ ಬೆಂಗಳೂರಿಗೆ ಓಮ್ನಿ ಕಾರು ಬರುತ್ತಿತ್ತು. ಫ್ಲೈ ಓವರ್ ಮೇಲೆ ವೇಗವಾಗಿ ಬಂದು ನಿಂತಿದ್ದ ಟಾಟಾ ಏಸ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓಮ್ನಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಸಂಚಾರಿ ಪೊಲೀಸರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಪಘಾತದಿಂದ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.Sign in to your account
Username or Email Address


Password

 Remember Me


