ಕಲಬುರಗಿ:  ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಅವಹೇಳನಕಾರಿ ಹೇಳಿಕೆಗೆ ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ ಕೆಂಡಾಮಂಡಲವಾಗಿದ್ದಾರೆ.ದಿನೇಶ್ ಗುಂಡೂರಾವ್‍ಗೆ ಗಂಡಸ್ತನವಿದ್ರೆ ಹಾಗೂ ತನ್ನ ತಾಯಿ ಎದೆ ಹಾಲು ಕುಡಿದಿದ್ರೆ ಅವರು ಮೊದಲು ಕಲಬುರಗಿ ಜಿಲ್ಲೆಗೆ ಬರಲಿ. ಅವರು ಯೋಗಿ ಆದಿತ್ಯನಾಥ್ ಬಗ್ಗೆ ಹೇಳಿದ್ದನ್ನ ನಾನು ಮಾಡಿ ತೋರಿಸುತ್ತೇನೆ ಅಂತಾ ಕಿಡಿಕಾರಿದ್ದಾರೆ.ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಮಾತನಾಡಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಅವರನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು. ಅವರು ಕರ್ನಾಟಕಕ್ಕೆ ಬಂದು ಭಾಷಣ ಮಾಡುತ್ತಾರೆ. ಈ ಬಾರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿಕೆ ನಿಡಿದ್ದರು. ಇವರು ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಸಂಸದ ಪ್ರತಾಪದ ಸಿಂಹ, ಸಂಸದೆ ಶೋಭಾಕರಂದ್ಲಾಜೆ ಕಿಡಿಕಾರಿದ್ದಾರೆ.ಈ ಹಿಂದೆ ವಿಜಯಪುರದಲ್ಲಿ ನಡೆದಿದ್ದ ವೀರಶೈವ ಸಮಾವೇಶದಲ್ಲಿ ಎಂ.ಬಿ.ಪಾಟೀಲ್ ವಿರುದ್ಧ ಆಕ್ರೋಶಭರಿತ ಮಾತುಗಳನ್ನಾಡಿ ರಾಜ್ಯ ಮಾಧ್ಯಮಗಳಲ್ಲದೇ ರಾಷ್ಟ್ರೀಯ ಮಾಧ್ಯಮಗಳಲ್ಲೂ ಸಹ ದಿವ್ಯಾ ಹಾಗರಗಿ ಸಖತ್ ಫೇಮಸ್ ಆಗಿದ್ದರು.Sign in to your account
Username or Email Address


Password

 Remember Me


