ಬಳ್ಳಾರಿ: ಶಾಸಕ ತಿಪ್ಪೇಸ್ವಾಮಿಗೆ ಟಿಕೆಟ್ ತಪ್ಪಿದಕ್ಕೆ ಅವರ ಬೆಂಬಲಿಗರು ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮೇಲೆ ಕಲ್ಲು, ಚಪ್ಪಲಿ ತೂರಾಡಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.ಈ ಗಲಾಟೆಗೆ ಸ್ವತಃ ತಿಪ್ಪೇಸ್ವಾಮಿಯಿಂದಲೇ ಪ್ರಚೋದನೆ ನೀಡಿದ್ದು, ಹೋಗಿ ಗಲಾಟೆ ಮಾಡ್ರೋ.. ಹೋಗಿ ಕಲ್ಲು ತೂರಾಟ ನಡೆಸಿ… ಇಲ್ಲದಿದ್ರೆ ಸುಮ್ಮನಿರಿ… ಬೆಂಬಲಿಗರಿಗೆ ಹೇಳಿದ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ; ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲುಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗ ಎಸ್‍ಪಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲು ಮುಂದಾಗಿದ್ದು, ತಿಪ್ಪೇಸ್ವಾಮಿಯನ್ನು ಕೂಡಲೇ ಬಂಧಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿಇತ್ತೀಚೆಗೆ ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಮಾಡಲು ಆಗಮಿಸಿದ್ದ ವೇಳೆ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಕಲ್ಲು, ಚಪ್ಪಲಿ, ಪೊರಕೆಯ ಸ್ವಾಗತ ನಿಡಿದ್ದರು. ಇದನ್ನೂ ಓದಿ: ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ, ದೂರು ನೀಡಲ್ಲ: ಶ್ರೀರಾಮುಲುhttps://www.youtube.com/watch?v=-yKLC0zlBY8https://www.youtube.com/watch?v=i_4AzaKDoT8Sign in to your account
Username or Email Address


Password

 Remember Me


