ಹಾಸನ: ಯುವಕನನ್ನು ಕೊಲೆ ಮಾಡಿ ದುಷ್ಕರ್ಮಿಗಳು ಬಾವಿಗೆ ಬಿಸಾಡಿರುವ ಘಟನೆ ಜಿಲ್ಲೆಯ ಹೊರ ವಲಯದ ಹೊಯ್ಸಳ ರೆಸಾರ್ಟ್ ಬಳಿ ನಡೆದಿದೆ.ಹಾಸನದ ವಲ್ಲಭಾಯಿ ರಸ್ತೆಯ ಹರ್ಷ (30) ಕೊಲೆಯಾದ ಯುವಕ. ಮೃತ ಹರ್ಷ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಆದ್ದರಿಂದ ಹಣಕಾಸು ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎನ್ನಲಾಗಿದೆ.ಹರ್ಷ ಮಾರ್ಚ್ ನಲ್ಲಿ ಸ್ನೇಹಿತನ ಮನೆಯಲ್ಲಿ ಮಲಗುತ್ತೇನೆ ಎಂದು ಹೋಗಿದ್ದರು. ನಂತರ ಕಾಣೆಯಾಗಿದ್ದರು. ಈ ಬಗ್ಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಆದರೆ ಈಗ ಹರ್ಷ ಅವರ ಮೃತ ದೇಹ ಹೊಯ್ಸಳ ರೆಸಾರ್ಟ್ ಬಳಿ ಇರುವ ಒಂದು ಬಾವಿಯಲ್ಲಿ ಪತ್ತೆಯಾಗಿದೆ.ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 Advertisement 




Sign in to your account
Username or Email Address


Password

 Remember Me


