ಕಾರವಾರ: ಚುನಾವಣೆ ಬಂದರೆ ರಾಜಕಾರಣಿಗಳು ಮತ ಬೇಟೆಗಾಗಿ ಮತದಾರರಿಗೆ ಹಣ ಚೆಲ್ಲುತ್ತಾರೆ. ಆದರೆ, ಚುನಾವಣಾ ಪ್ರಚಾರಕ್ಕೆ ಬಂದ ಅಭ್ಯರ್ಥಿಗೆ ಮತದಾರನೋರ್ವ ತಾನೇ ಹಣ ನೀಡಿರುವುದು ಅಂಕೋಲದಲ್ಲಿ ನಡೆದಿದೆ.ಪಟ್ಟಣದ ಲಕ್ಷ್ಮೀಶ್ವರ ನಗರದ ಪ್ರಕಾಶ್ ನಾಯ್ಕ ಅವರ ಮನೆಗೆ ಮತ ಕೇಳಲು ಹೋಗಿದ್ದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರಿಗೆ ಐನೂರು ರೂಪಾಯಿಯನ್ನು ತನ್ನ ಜೇಬಿನಿಂದ ತೆಗೆದು ಕೊಟ್ಟು, ಮತದಾನ ಜಾಗೃತಿ ಮೂಡಿಸಿ ಜನಸಾಮಾನ್ಯರಿಂದ ಮೆಚ್ಚುಗೆ ಪಡೆದಿದ್ದಾರೆ.ಚುನಾವಣೆ ಬಂದರೆ ಅಭ್ಯರ್ಥಿಗಳು ಮತದಾರರಿಗೆ ಹಣದ ಆಮಿಷ ಒಡ್ಡುತ್ತಾರೆ. ಇದು ನಿಲ್ಲಬೇಕು ಎನ್ನುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಹಣ ನೀಡಿ ಜಾಗೃತಿ ಮೂಡಿಸುತ್ತಿರುವೆ ಎಂದು ಪ್ರಕಾಶ್ ನಾಯ್ಕ ಹೇಳಿದ್ದಾರೆ.


 Advertisement 




 Advertisement 






 Advertisement 




Sign in to your account
Username or Email Address


Password

 Remember Me


