ರಾಯಚೂರು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನನ್ನ ಬರ್ಬವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರಿನ ಲಿಂಗಸುಗೂರಿನ ರಾಂಪುರ ಭೂಪುರಿನಲ್ಲಿ ನಡೆದಿದೆ.40 ವರ್ಷದ ಶಿವಪ್ಪ ಕೊಲೆಯಾದ ವ್ಯಕ್ತಿ. ಆರೋಪಿ ಬಸ್ಸಪ್ಪನನ್ನ ಬಂಧಿಸಲಾಗಿದೆ.ಕೊಲಿ ಕೆಲಸ ಮುಗಿಸಿ ಕುಡಿದ ಮತ್ತಿನಲ್ಲಿದ್ದ ಇಬ್ಬರ ಮಧ್ಯೆ ಕೂಲಿ ಹಂಚಿಕೆ ವಿಚಾರದಲ್ಲಿ ಜಗಳವಾಗಿದೆ. ಜಗಳ ತಾರಕಕ್ಕೇರಿ ಬಸ್ಸಪ್ಪ ಕೊಡಲಿಯಿಂದ ಶಿವಪ್ಪನನ್ನ ಕೊಚ್ಚಿ ಕೊಲೆ ಮಾಡಿದ್ದಾನೆ.ಘಟನೆ ಹಿನ್ನೆಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.






 Advertisement 




Sign in to your account
Username or Email Address


Password

 Remember Me


