ಕೋಲಾರ: ದಂಡದ ಹಣವನ್ನು ಗುಳುಂ ಮಾಡಿ ಕೇಂದ್ರ ರೈಲ್ವೇ ಇಲಾಖೆಯನ್ನೇ ವಂಚಿಸಿದ ಮೂವರು ಆರ್ ಪಿಎಫ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.ಜಿಲ್ಲೆಯ ಬಂಗಾರಪೇಟೆ ರೈಲ್ವೇ ನಿಲ್ದಾಣದ ಅರ್ ಪಿಎಫ್ ಅಧಿಕಾರಿಗಳನ್ನು ಅಮಾನತು ಮಾಡಿರುವ ರೈಲ್ವೇ ಇಲಾಖೆ, 3 ಜನ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಬಂಗಾರಪೇಟೆ ಆರ್ ಪಿಎಫ್ ಇನ್ಸ್ ಪೆಕ್ಟರ್ ಕಿಶೋರ್ ಲಾಲ್, ಪಿಎಸ್ ಐ ಪದ್ಮನಾಭನ್, ಕೋರ್ಟ್ ಪಿಸಿ ಜಗದೀಶ್ ಇಲಾಖೆಗೆ ವಂಚನೆ ಮಾಡಿ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತಾದ ಅಧಿಕಾರಿಗಳಾಗಿದ್ದಾರೆ.ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದವರಿಂದ ವಸೂಲಿ ಮಾಡಿದ ಹಣದಲ್ಲಿ 1.90 ಲಕ್ಷ ಮೊತ್ತ ತಿದ್ದಿ ರೈಲ್ವೆಗೆ ಪಾವತಿ ಮಾಡದೆ ವಂಚನೆ ಮಾಡಿದ್ದಾರೆ ಎಂಬ ಅರೋಪ ಇವರ ವಿರುದ್ಧ ಕೇಳಿ ಬಂದಿತ್ತು. ಅದರಂತೆ ತನಿಖೆ ನಡೆಸಿದಾಗ ಅಧಿಕಾರಿಗಳು ಇಲಾಖೆಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.2016 ಮಾರ್ಚ್ ನಿಂದ 2018 ರ ಮಾರ್ಚ್ ವರೆಗೆ ರೈಲ್ವೇ ಕಾನೂನು ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ರೈಲ್ವೇ ನ್ಯಾಯಾಲಯ ವಿಧಿಸಿದ್ದ ದಂಡದ ಹಣವನ್ನೇ ಮೋಸ ಮಾಡಿ ಸಿಕ್ಕಿಬಿದ್ದಿರುವ ಅಧಿಕಾರಿಗಳು ಇವರಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ.


 Advertisement 







 Advertisement 




Sign in to your account
Username or Email Address


Password

 Remember Me


