ರಾಯಚೂರು: ಕರ್ನಾಟಕ ವಿಧಾನಸಭಾ ಚುಣಾವಣೆ ಹಿನ್ನೆಲೆಯಲ್ಲಿ ಎಲ್ಲಾ ಕಡೆಯೂ ದಾಳಿ ಮಾಡಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡುತ್ತಿದ್ದಾರೆ. ಈಗ ಬೊಮ್ಮನಾಳ ಬಳಿ ಲಕ್ಷಾಂತರ ರೂಪಾಯಿ ಮದ್ಯ ಅಕ್ರಮ ಸಾಗಣೆ ಮಾಡುತ್ತಿದ್ದ ಇಬ್ಬರನ್ನ ಬಂಧಿಸಿದ್ದು, ಮದ್ಯವನ್ನು ಜಪ್ತಿ ಮಾಡಲಾಗಿದೆ.ಮುದಗಲ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 300 ಬಾಕ್ಸ್ ನಲ್ಲಿದ್ದ 2,592 ಲೀಟರ್ ವಿಸ್ಕಿ ಮತ್ತು ಎರಡು ಟಾಟಾ ಏಸ್ ವಾಹನ ಜಪ್ತಿ ಮಾಡಿದ್ದಾರೆ. ಅಂದಾಜು 4 ಲಕ್ಷದ 32 ಸಾವಿರ ರೂ. ಮೌಲ್ಯದ ಮದ್ಯ ಜಪ್ತಿಯಾಗಿದೆ. ಆರೋಪಿಗಳಾದ ಮುತ್ತು ಮತ್ತು ಸದ್ದಾಂ ಎಂಬುವರನ್ನ ಬಂಧಿಸಲಾಗಿದೆ. ಬಾಗಲಕೋಟೆಯಿಂದ ಬೊಮ್ಮನಾಳ ಮಾರ್ಗವಾಗಿ ಮದ್ಯ ಸಾಗಣೆ ಮಾಡಲಾಗುತ್ತಿದ್ದ ವೇಳೆ ದಾಳಿ ಮಾಡಲಾಗಿದೆ.ಈ ಘಟನೆ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ.


 Advertisement 







 Advertisement 




Sign in to your account
Username or Email Address


Password

 Remember Me


