ಬಳ್ಳಾರಿ: ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿಯಾಗಿ ವೈದ್ಯ ದಂಪತಿ ಸೇರಿದಂತೆ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬಳ್ಳಾರಿಯ ಸೋಮಸಮುದ್ರ ಗ್ರಾಮದ ಹೊರವಲಯದ ರಸ್ತೆ ಬಳಿ ನಡೆದಿದೆ.ವೈದ್ಯ ಸಂತೋಷ್, ಅವರ ಪತ್ನಿ ಅರ್ಚನಾ, ಮಗಳು ಲಕ್ಷ್ಮಿ, ತಂದೆ ಸಿದ್ರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಸಂತೋಷ್ ತಾಯಿ ಲೀಲಾವತಿ ಹಾಗೂ ಅವರ ಮೊಮ್ಮಗ ತನಿಷ್ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ವಿಫ್ಟ್ ಕಾರಿನಲ್ಲಿ ವೈದ್ಯರ ಕುಟುಂಬ ಪ್ರಯಾಣಿಸುತ್ತಿದ್ದು, ಅತಿವೇಗದಿಂದ ಕಾರು ಚಲಾಯಿಸಿ ರಸ್ತೆ ಬದಿಗೆ ಗೋಡೆಗೆ ಗುದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಸ್ಥಳಕ್ಕೆ ಕುರುಗೋಡು ಪೊಲೀಸರು ಹಾಗೂ ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


