ಬೆಂಗಳೂರು: `ಬಿಗ್ ಬಾಸ್’ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ಶ್ರುತಿ ಪ್ರಕಾಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.`ಬಿಗ್ ಬಾಸ್’ ಮನೆಯೊಳಗಿದ್ದ ಸಂದರ್ಭದಲ್ಲಿ ಇಬ್ಬರೂ ಆತ್ಮೀಯರಾಗಿದ್ದರು. ಅಲ್ಲಿಂದ ಹೊರ ಬಂದ ಬಳಿಕ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಚಂದನ್ ಶೆಟ್ಟಿ ರಿಯಾಲಿಟಿ ಶೋ ತೀರ್ಪುಗಾರ, ಸಂಗೀತ ನಿರ್ದೇಶನ, ಗಾಯನ ಹೀಗೆ ಹಲವು ರೀತಿಯಲ್ಲಿ ಚಂದನ್ ಬ್ಯುಸಿಯಾಗಿದ್ದಾರೆ. ಶ್ರುತಿ ಅವರು ಗಾಯನ, ಅಭಿನಯದಲ್ಲಿ ತೊಡಗಿಕೊಂಡಿದ್ದಾರೆ.ಇದೀಗ ಚಂದನ್ ಹಾಗೂ ಶ್ರುತಿ ಪ್ರಕಾಶ್ ಒಂದೇ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಇವರಿಬ್ಬರ ಕಾಂಬಿನೇಷನ್ ನಲ್ಲಿ ಹೊಸ ಸಾಂಗ್ ಮೂಡಿ ಬರುತ್ತಿದೆ. ಇದರ ಬಗ್ಗೆ ಖುಷಿಯಾಗಿರುವ ಶ್ರುತಿ ಪ್ರಕಾಶ್ ತಮ್ಮಿಬ್ಬರ ಫೋಟೋ ಹಾಕಿ ಹೊಸ ಸಾಂಗ್ ಗಾಗಿ ಕಾಯುತ್ತಿದ್ದೇನೆ ಎಂದು ತಮ್ಮ ಸಂತಸವನ್ನು ಇನ್ಸ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.https://www.instagram.com/p/BhYiHw0gTxM/?hl=en&taken-by=shrutiprakash Sign in to your account
Username or Email Address


Password

 Remember Me


