ಗದಗ: ಜಿಲ್ಲೆಯ ಮಾಜಿ ಶಾಸಕ ರಾಮಣ್ಣ ಲಮಾಣಿ ಮಹಿಳೆಯೊಬ್ಬರ ಜೊತೆ ಅಶ್ಲೀಲ ಮಾತುಕತೆ ನಡೆಸಿರುವ ಆಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.ದೂರವಾಣಿ ಕರೆ ಮಾಡಿ ಪರಿಚಯಮಾಡಿಕೊಂಡ ಮಹಿಳೆ ಲಮಾಣಿ ಅವರ ಜೊತೆ ಅಶ್ಲೀಲ ಮಾತುಕತೆ ನಡೆಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಆಡಿಯೋ ಲಮಾಣಿ ಶಾಸಕರಾಗಿದ್ದ ವೇಳೆ ನಡೆಸಿದ ಸಂಭಾಷಣೆ ಎನ್ನಲಾಗಿದೆ.ಲಮಾಣಿ ಅವರಿಗೆ ಕರೆ ಮಾಡಿದ್ದ ಯುವತಿ ತನ್ನನ್ನು ಧಾರವಾಡದ ಕಾಲೇಜು ವಿದ್ಯಾರ್ಥಿನಿ ಎಂದು ಪರಿಚಯ ಮಾಡಿಕೊಂಡಿದ್ದು, ಬಳಿಕ ತನ್ನ ಜೊತೆ ಆಶ್ಲೀಲವಾಗಿ ಮಾತನಾಡುವಂತೆ ಪ್ರಚೋದನೆ ನೀಡಿದ್ದಾಳೆ. ಈ ವೇಳೆ ಆಕೆಯ ಬಲೆ ಬಿದ್ದ ಲಮಾಣಿ ಮಾತಿನಲ್ಲಿ ಮುಳುಗಿ ಆಶ್ಲೀಲವಾಗಿ ಸಂಭಾಷಣೆ ನಡೆಸಿದ್ದಾರೆ. ಅಲ್ಲದೇ ತಾನು ಸಾವಿರಾರು ಮಹಿಳೆಯರ ಜೊತೆ ಮಲಗಿದ್ದೀನಿ ಎಂದು ಸಂಭಾಷಣೆ ವೇಳೆ ಹೇಳಿದ್ದು, ಆಡಿಯೋ ಸದ್ಯ ವೈರಲ್ ಆಗಿದೆ.2008 ರ ಚುನಾವಣೆಯಲ್ಲಿ ಶಿರಹಟ್ಟಿಯ ಎಸ್‍ಸಿ ಮೀಸಲು ಕ್ಷೇತ್ರದಿಂದ ಗೆದ್ದಿದ್ದ ರಾಮಣ್ಣ ಲಮಾಣಿ ಸದ್ಯ ಶಿರಹಟ್ಟಿ ಕ್ಷೇತ್ರದ ಸಂಭವನೀಯ ಅಭ್ಯರ್ಥಿಯಾಗಿದ್ದಾರೆ.Sign in to your account
Username or Email Address


Password

 Remember Me


